ಮುಂಬೈ: ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೇರ್ಪಡೆಯಾಗಲಿರುವ ಎರಡು ತಂಡಗಳನ್ನು ಅಕ್ಟೋಬರ್ 17ರಂದು ಇ ಬಿಡಿಂಗ್ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜಿಸಿದೆ.

ಮಂಡಳಿಯು ಆಗಸ್ಟ್ 31ರಂದು ಐಪಿಎಲ್ ಫ್ರ್ಯಾಂಚೈಸಿಗಳನ್ನು ಖರೀದಿಸಲು ಬಿಡ್‌ಗಳನ್ನು ಆಹ್ವಾನಿಸಿದೆ. ಅಕ್ಟೋಬರ್ 5ರವರೆಗೂ ಬಿಡ್ ಸಲ್ಲಿಸಲು ಅವಕಾಶ ಇದೆ.

‘ಐಪಿಎಲ್‌ನಲ್ಲಿ ಆಡುವ ಎರಡು ಹೊಸ ಫ್ರ್ಯಾಂಚೈಸಿಗಳನ್ನು ಪಡೆಯಲು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಅದಕ್ಕಾಗಿ ಐಪಿಎಲ್ ಆಡಳಿತ ಸಮಿತಿಯು ಆಹ್ವಾನವನ್ನೂ ಮಾಡಿದೆ. ಅ.5ರವರೆಗೆ ಬಿಡ್ ಸಲ್ಲಿಸಲು ಗಡುವು ನೀಡಿದೆ. 2022ರ ಋತುವಿನಲ್ಲಿ ಉಭಯ ತಂಡಗಳು ಆಡಲಿವೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಎರಡು ತಂಡಗಳಿಗೆ ಕ್ರಮವಾಗಿ ಅಹಮದಾಬಾದ್, ಲಖನೌ ಅಥವಾ ಪುಣೆ ತವರಿನ ಕ್ರೀಡಾಂಗಣಗಳನ್ನಾಗಿ ಮಾಡುವ ಸಾಧ್ಯತೆ ಇದೆ.

ಫ್ರಾಂಚೈಸಿಗಳನ್ನು ಪಡೆಯಲು ದೇಶದ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಸ್ಪರ್ಧೆಯಲ್ಲಿವೆ ಎನ್ನಲಾಗಿದೆ. ಅದರಲ್ಲಿ ಅದಾನಿ ಸಮೂಹ, ಆರ್‌ಪಿಜಿ ಸಂಜೀವ್ ಗೋಯೆಂಕಾ ಸಮೂಹ, ಟಾರೆಂಟ್ ಫಾರ್ಮಾ ಮತ್ತು ಪ್ರತಿಷ್ಠಿತ ಬ್ಯಾಂಕ್ ಕೂಡ ಈ ರೇಸ್‌ನಲ್ಲಿವೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.