ಸೋಮವಾರ, ಫೆಬ್ರವರಿ 24, 2020
19 °C
ನ್ಯೂಜಿಲೆಂಡ್‌ 375

ಎರಡನೇ ಕ್ರಿಕೆಟ್‌ ಟೆಸ್ಟ್‌: ಇಂಗ್ಲೆಂಡ್‌ಗೆ ಆರಂಭದ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯಾಮಿಲ್ಟನ್‌, ನ್ಯೂಜಿಲೆಂಡ್‌: ಆತಿಥೇಯ ಕಿವೀಸ್‌ ವೇಗಿಗಳಾದ ಟಿಮ್‌ ಸೌಥಿ ಮತ್ತು ಮ್ಯಾಟ್‌ ಹೆನ್ರಿ, ಎರಡನೇ ದಿನದಾಟದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಇಂಗ್ಲೆಂಡ್‌ ಆಟಗಾರರನ್ನು ಕಾಡಿದರು. ಹ್ಯಾಮಿಲ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಶನಿವಾರ ನ್ಯೂಜಿಲೆಂಡ್‌ನ 375 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್‌ 2 ವಿಕೆಟ್‌ಗೆ 39 ರನ್‌ ಗಳಿಸಿ ಪರದಾಡುತ್ತಿದೆ.

24 ರನ್‌ ಗಳಿಸಿ ಅಜೇಯರಾಗಿ ಉಳಿದಿರುವ ಆರಂಭ ಆಟಗಾರ ರೋರಿ ಬರ್ನ್ಸ್‌ ಎರಡು ಜೀವದಾನ ಪಡೆದಿದ್ದಾರೆ. ಜೋ ರೂಟ್‌ (ಔಟಾಗದೇ 6) ಕೂಡ ಲಯದಲ್ಲಿದ್ದಂತೆ ಕಾಣಲಿಲ್ಲ.

ಸೌಥಿ ಬೌಲಿಂಗ್‌ನಲ್ಲಿ ಡಾಮ್‌ ಸಿಬ್ಲಿ ಅವರ ಹೆಲ್ಮೆಟ್‌ಗೆ ಚೆಂಡು ಜೋರಾಗಿ ಬಡಿಯಿತು. ನಂತರ ಸೌಥಿ ಬೌಲಿಂಗ್‌ನಲ್ಲೇ ಎಲ್‌ಬಿಡಬ್ಲ್ಯು ಆದರು. ಜೊ ಡೆನ್ಲಿ, ಹೆನ್ರಿ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ವಾಟ್ಲಿಂಗ್‌ಗೆ ಕ್ಯಾಚಿತ್ತರು.

ಸ್ಕೋರುಗಳು: ನ್ಯೂಜಿಲೆಂಡ್‌: 375 (ಟಾಮ್‌ ಲಾಥಮ್‌ 105, ರಾಸ್‌ ಟೇಲರ್‌ 53, ಬ್ರಾಡ್ಲಿ ವಾಟ್ಲಿಂಗ್‌ 55, ಡಾರಿಲ್‌ ಮಿಚೆಲ್‌ 73; ಸ್ಟುವರ್ಟ್‌ ಬ್ರಾಡ್‌ 73ಕ್ಕೆ4, ಕ್ರಿಸ್‌ ವೋಕ್ಸ್‌ 83ಕ್ಕೆ3, ಸ್ಯಾಮ್‌ ಕರನ್‌ 63ಕ್ಕೆ2); ಇಂಗ್ಲೆಂಡ್‌: 18 ಓವರುಗಳಲ್ಲಿ 2 ವಿಕೆಟ್‌ಗೆ 39 (ರೋರಿ ಬರ್ನ್ಸ್‌ ಬ್ಯಾಟಿಂಗ್ 24).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು