ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಂಚೆಸ್ಟರ್‌ನಲ್ಲಿ 2ನೇ ಟೆಸ್ಟ್: ಇಂಗ್ಲೆಂಡ್‌ಗೆ ಆರಂಭಿಕ ಆಘಾತ ನೀಡಿದ ಚೇಸ್

Last Updated 16 ಜುಲೈ 2020, 21:30 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಡಾಮ್ ಸಿಬ್ಲಿ ಮತ್ತು ಬೆನ್‌ ಸ್ಟೋಕ್ಸ್‌ ಅವರು ತಮ್ಮ ತಾಳ್ಮೆಯ ಜೊತೆಯಾಟದಿಂದ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು.

ಆಫ್‌ಸ್ಪಿನ್ನರ್ ರಾಸ್ಟನ್ ಚೇಸ್ (53ಕ್ಕೆ2) ಬೌಲಿಂಗ್‌ ದಾಳಿಗೆ ಇಂಗ್ಲೆಂಡ್ ಆರಂಭದಲ್ಲಿಯೇ ಪೆಟ್ಟು ತಿಂದಿತ್ತು. ಸಿಬ್ಲಿ (ಬ್ಯಾಟಿಂಗ್ 86; 253ಎಸೆತ) ಮತ್ತು ಸ್ಟೋಕ್ಸ್‌ (ಬ್ಯಾಟಿಂಗ್ 59; 159ಎಸೆತ) ಅವರ ಬ್ಯಾಟಿಂಗ್‌ನಿಂದಾಗಿ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 82 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 207 ರನ್‌ ಗಳಿಸಲು ಸಾಧ್ಯವಾಯಿತು. ಇವರಿಬ್ಬರೂ ಮುರಿಯದ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 126 ರನ್‌ ಗಳಿಸಿದರು.

ಮಳೆಯಿಂದಾಗಿ ಒಂದೂವರೆ ಗಂಟೆ ತಡವಾಗಿ ಆರಂಭವಾದ ದಿನದಾಟದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಆರಂಭದ 13 ಓವರ್‌ಗಳಲ್ಲಿ ಸಿಬ್ಲಿ ಮತ್ತು ರೋರಿ ಬರ್ನ್ಸ್‌ ಅವರು ವೇಗಿಗಳ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದರು. ಆದರೆ 14ನೇ ಓವರ್‌ನಲ್ಲಿ ಚೇಸ್ ಮೇಲುಗೈ ಸಾಧಿಸಿದರು. ಆ ಓವರ್‌ನ ಸತತ ಎರಡು ಎಸೆತಗಳಲ್ಲಿ ರೋರಿ ಮತ್ತು ಕ್ರಾಲಿ ವಿಕೆಟ್ ಗಳಿಸಿದರು. ಕ್ರೀಸ್‌ಗೆ ಬಂದ ನಾಯಕ ಜೋ ರೂಟ್ ಆತ್ಮವಿಶ್ವಾಸದಿಂದ ಆಡಿದರು. ಆದರೆ, ಅಲ್ಜರಿ ಜೋಸೆಫ್ ಎಸೆತದಲ್ಲಿ ಜೇಸನ್ ಹೋಲ್ಡರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ ಸಿಬ್ಲಿ ದಿಟ್ಟತನದಿಂದ ಕ್ರೀಸ್‌ನಲ್ಲಿ ಕಾಲೂರಿದರು.ಸೌತಾಂಪ್ಟನ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿಯೂ ಮೊದಲ ದಿನ ಮಳೆ ಕಾಡಿತ್ತು. ನಂತರದ ನಾಲ್ಕು ದಿನಗಳ ಆಟದಲ್ಲಿ ವೆಸ್ಟ್‌ ಇಂಡೀಸ್ ತಂಡವು ಜಯಿಸಿತ್ತು. ಕಳೆದ 32 ವರ್ಷಗಳಲ್ಲಿ ವಿಂಡೀಸ್ ಬಳಗವು ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದಿಲ್ಲ. ಈ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದೆ.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದಲ್ಲಿ ಜೋ ರೂಟ್ ಆಡಿರಲಿಲ್ಲ. ಅವರ ಬದಲಿಗೆ ಬೆನ್ ಸ್ಟೋಕ್ಸ್‌ ನಾಯಕತ್ವ ವಹಿಸಿದ್ದರು. ಆರ್ಚರ್ ಬದಲಿಗೆ ಸ್ಟುವರ್ಟ್ ಬ್ರಾಡ್ ಅವರಿಗೆ ಅವಕಾಶ ನೀಡಲಾಗಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌
ಇಂಗ್ಲೆಂಡ್:
82 ಓವರ್‌ಗಳಲ್ಲಿ 3ಕ್ಕೆ207 (ರೋರಿ ಬರ್ನ್ಸ್‌ 15, ಡಾನ್ ಸಿಬ್ಲಿ ಔಟಾಗದೆ 86, ಜೋ ರೂಟ್ 23, ಬೆನ್ ಸ್ಟೋಕ್ಸ್‌ ಔಟಾಗದೆ 59, ರಾಸ್ಟನ್ ಚೇಸ್ 53ಕ್ಕೆ2, ಅಲ್ಜರಿ ಜೋಸೆಫ್ 41ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT