ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈಗೆ ಬಂದ ಇಂಗ್ಲೆಂಡ್ ಕ್ರಿಕೆಟ್ ತಂಡ

ಫೆ.5ರಿಂದ ಟೆಸ್ಟ್ ಸರಣಿ ಆರಂಭ: ಕೊರೊನಾ ಕಾಲಘಟ್ಟದಲ್ಲಿ ಭಾರತದಲ್ಲಿ ನಡೆಯಲಿರುವ ಮೊದಲ ಅಂತರರಾಷ್ಟ್ರೀಯ ಸರಣಿ
Last Updated 27 ಜನವರಿ 2021, 15:37 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಕೊರೊನಾ ಕಾಲಘಟ್ಟದಲ್ಲಿ ಭಾರತವು ಆತಿಥ್ಯ ವಹಿಸಲಿರುವ ಮೊದಲ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಡಲು ಇಂಗ್ಲೆಂಡ್ ತಂಡದ ಆಟಗಾರರು ಬುಧವಾರ ಬಂದಿಳಿದರು.

ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿದ ಜೋ ರೂಟ್ ಬಳಗವು ಚೆನ್ನೆಗೆ ಬಂದಿಳಿದಿದೆ. ಬಯೋಬಬಲ್ ನಿಯಮದ ಪ್ರಕಾರ ಹೋಟೆಲ್‌ ಕ್ವಾರ್ಂಟೈನ್‌ಗೆ ಒಳಗಾಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಎರಡು ಟೆಸ್ಟ್‌ಗಳು ನಡೆಯಲಿವೆ.

’ಶ್ರೀಲಂಕಾದಿಂದ ಬೆಳಿಗ್ಗೆ 10.30ಕ್ಕೆ ವಿಶೇಷ ವಿಮಾನದಲ್ಲಿ ಪ್ರಯಾಣ ಆರಂಭಿಸಿದ ಇಂಗ್ಲೆಂಡ್ ತಂಡವು ಮಧ್ಯಾಹ್ನದ ಹೊತ್ತಿಗೆ ಚೆನ್ನೈಗೆ ಬಂದಿತು. ಆಟಗಾರರು ನೇರವಾಗಿ ಹೋಟೆಲ್‌ಗೆ ತೆರಳಿದರು‘ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮತ್ತು ವೇಗಿ ಜೋಫ್ರಾ ಆರ್ಚರ್ ಅವರು ಭಾನುವಾರ ಇಂಗ್ಲೆಂಡ್‌ನಿಂದ ಚೆನ್ನೈಗೆ ಬಂದಿದ್ದಾರೆ. ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಭಾರತ ತಂಡದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಉಪನಾಯಕ ಅಜಿಂಕ್ಯ ರಹಾನೆ ಮಂಗಳವಾರ ರಾತ್ರಿ ಚೆನ್ನೈ ತಲುಪಿದ್ದಾರೆ. ಚೇತೆಶ್ವರ್ ಪೂಜಾರ, ಜಸ್‌ಪ್ರೀತ್ ಬೂಮ್ರಾ ಮತ್ತು ಗಾಬಾ ಟೆಸ್ಟ್ ಹೀರೊ ರಿಷಭ್ ಪಂತ್ ಬುಧವಾರ ಬೆಳಿಗ್ಗೆ ಬಂದಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರು ಕೂಡ ಸಂಜೆ ಇಲ್ಲಿಗೆ ಬಂದಿದ್ದಾರೆ.

ಉಭಯ ತಂಡಗಳ ಆಟಗಾರರಿಗೆ ಲೀಲಾ ಪ್ಯಾಲೆಸ್ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಜೀವ ಸುರಕ್ಷಾ ವಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

’ಆಟಗಾರರು ಆರು ದಿನಗಳ ವರೆಗೆ ಕ್ವಾರಂಟೈನ್‌ನಲ್ಲಿರುವರು. ಎಲ್ಲರಿಗೂ ಕೋವಿಡ್ –19 ಪರೀಕ್ಷೆ ಮಾಡಲಾಗುವುದು. ಫೆ.2ರಿಂದ ಅಭ್ಯಾಸಕ್ಕೆ ಅವಕಾಶ ನೀಡಲಾಗುವುದು‘ ಎಂದು ಟಿಎನ್‌ಸಿಎ ಅಧಿಕಾರಿ ತಿಳಿಸಿದ್ದಾರೆ.

ಭಾರತ ತಂಡವು ಈಚೆಗೆ ಆಸ್ಟ್ರೇಲಿಯಾದಲ್ಲಿ 2–1ರಿಂದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಜಯಿಸಿ ಇತಿಹಾಸ ರಚಿಸಿತ್ತು.

ಚೆನ್ನೈನಲ್ಲಿ 2016ರ ಡಿಸೆಂಬರ್‌ನಲ್ಲಿ ಕೊನೆಯ ಸಲ ಟೆಸ್ಟ್ ಪಂದ್ಯ ನಡೆದಿತ್ತು. ಆಗಲೂ ಇಂಗ್ಲೆಂಡ್ ಎದುರು ಭಾರತ ಆಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT