ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಇಂಗ್ಲೆಂಡ್‌ಗೆ ಗೆಲುವು

Last Updated 20 ಅಕ್ಟೋಬರ್ 2018, 18:21 IST
ಅಕ್ಷರ ಗಾತ್ರ

ಪಲ್ಲೆಕೆಲೆ: ಬೌಲಿಂಗ್‌ ಮತ್ತು ಬ್ಯಾಟಿಂಗ್‌ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ ಇಂಗ್ಲೆಂಡ್‌ ತಂಡದವರು ಶ್ರೀಲಂಕಾ ಎದುರಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್‌ ನಿಯಮದ ಅನ್ವಯ 18ರನ್‌ಗಳಿಂದ ಗೆದ್ದಿದ್ದಾರೆ. ಇದರೊಂದಿಗೆ ಇನ್ನೊಂದು ಪಂದ್ಯದ ಆಟ ಬಾಕಿ ಇರುವಂತೆ 3–0ರಿಂದ ಸರಣಿ ಕೈವಶ ಮಾಡಿಕೊಂಡಿದ್ದಾರೆ.

ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 273ರನ್‌ ದಾಖಲಿಸಿತು.

ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್‌ 27 ಓವರ್‌ಗಳಲ್ಲಿ 2 ವಿಕೆಟ್‌ಗೆ 132ರನ್ ಕಲೆಹಾಕಿದ್ದ ವೇಳೆ ಧಾರಾಕಾರ ಮಳೆ ಸುರಿಯಿತು. ಸಾಕಷ್ಟು ಸಮಯ ಕಾದರೂ ವರುಣನ ಆಟ ನಿಲ್ಲಲಿಲ್ಲ. ಹೀಗಾಗಿ ಡಕ್ವರ್ಥ್‌ ಲೂಯಿಸ್‌ ನಿಯಮ ಅನ್ವಯಿಸಲಾಯಿತು. ಇದರ ಪ್ರಕಾರ ಇಂಗ್ಲೆಂಡ್‌ ತಂಡ ಗೆಲ್ಲಲು 27 ಓವರ್‌ಗಳಲ್ಲಿ 115ರನ್‌ ಗಳಿಸಬೇಕಿತ್ತು.

ಅದಾಗಲೇ ಎಯೊನ್‌ ಮಾರ್ಗನ್‌ ಪಡೆ ನಿಗದಿಗಿಂತಲೂ ಹೆಚ್ಚು ರನ್‌ ಕಲೆಹಾಕಿದ್ದರಿಂದ ವಿಜಯಿ ಎಂದು ಘೋಷಿಸಲಾಯಿತು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 273 (ನಿರೋಷನ್‌ ಡಿಕ್ವೆಲ್ಲಾ 52, ದಿನೇಶ್‌ ಚಾಂಡಿಮಲ್‌ 33, ಧನಂಜಯ ಡಿಸಿಲ್ವ 17, ದಸುನ್‌ ಶಾನಕ 66, ತಿಸಾರ ಪೆರೇರಾ 44, ಅಖಿಲ ಧನಂಜಯ ಔಟಾಗದೆ 32; ಕ್ರಿಸ್‌ ವೋಕ್ಸ್‌ 45ಕ್ಕೆ1, ಟಾಮ್‌ ಕರನ್‌ 50ಕ್ಕೆ1, ಮೋಯಿನ್ ಅಲಿ 55ಕ್ಕೆ2, ಆದಿಲ್‌ ರಶೀದ್‌ 36ಕ್ಕೆ1).

ಇಂಗ್ಲೆಂಡ್‌: 27 ಓವರ್‌ಗಳಲ್ಲಿ 2 ವಿಕೆಟ್‌ಗೆ 132 (ಜೇಸನ್‌ ರಾಯ್‌ 45, ಅಲೆಕ್ಸ್‌ ಹೇಲ್ಸ್‌ 12, ಜೋ ರೂಟ್‌ ಔಟಾಗದೆ 32, ಎಯೊನ್‌ ಮಾರ್ಗನ್‌ ಔಟಾಗದೆ 31; ಅಖಿಲ ಧನಂಜಯ 27ಕ್ಕೆ2).

ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 18ರನ್‌ಗಳ ಗೆಲುವು. 5 ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ.

ಪಂದ್ಯ ಶ್ರೇಷ್ಠ: ಎಯೊನ್‌ ಮಾರ್ಗನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT