ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ– ಪಡಿಕ್ಕಲ್ ಪದಾರ್ಪಣೆ

Published 7 ಮಾರ್ಚ್ 2024, 4:07 IST
Last Updated 7 ಮಾರ್ಚ್ 2024, 4:07 IST
ಅಕ್ಷರ ಗಾತ್ರ

ಧರ್ಮಶಾಲಾ: ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಗುರುವಾರ ಇಲ್ಲಿ ಆರಂಭವಾಗಿರುವ ಟೆಸ್ಟ್‌ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಭಾರತದ ಪ್ರಮುಖ ಆಫ್‌ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಹಾಗೂ ಇಂಗ್ಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್‌ ಜಾನಿ ಬೇಸ್ಟೊ ಅವರಿಗೆ ಇದು  ನೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯವಾಗಿದೆ. 

ಸರಣಿಯಲ್ಲಿ ಭಾರತ ಈಗಾಗಲೇ 3–1 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಗೆದ್ದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ದೃಷ್ಟಿಯಿಂದ ಆತಿಥೇಯ ತಂಡ ಪಟ್ಟಿಯಲ್ಲಿ ಇನ್ನಷ್ಟು ಕಾಲ ಅಗ್ರಸ್ಥಾನದಲ್ಲಿ ಉಳಿಯಬಹುದು.

ಕರ್ನಾಟಕದವರೇ ಆದ ದೇವದತ್ತ ಪಡಿಕ್ಕಲ್ ಅವರೂ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ. ಜಸ್‌ಪ್ರೀತ್‌ ಬೂಮ್ರಾ ಕೂಡ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್‌ ಕಡೆ ಕಳೆದ ಪಂದ್ಯದಲ್ಲಿ ಆಡಿದ್ದ ರಾಬಿನ್‌ಸನ್‌ ಬದಲಿಗೆ ಮಾರ್ಕ್‌ ವುಡ್‌ ಆಡಲಿದ್ದಾರೆ.

ಧರ್ಮಶಾಲಾದ ಪಿಚ್‌ ಹಾಗೂ ಶೀತ ಹವೆ ಇಂಗ್ಲೆಂಡ್‌ ಆಟಗಾರರಿಗೆ ತಮ್ಮ ತವರಿನಲ್ಲಿ ಇರುವಂತಹುದೇ ವಾತಾವರಣ ಕಲ್ಪಿಸಿಕೊಟ್ಟಿದೆ. ಸಮತಟ್ಟಾಗಿ ಕಾಣುವ ಪಿಚ್‌ನಲ್ಲಿ ತೇವಾಂಶವಿದೆ. ಪ್ರತಿ ದಿನದಾಟದ ಮೊದಲ ಅವಧಿಯಲ್ಲಿ ವೇಗದ ಬೌಲರ್‌ಗಳಿಗೆ ಅದರಿಂದ ಅನುಕೂಲವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT