ಶನಿವಾರ, ಸೆಪ್ಟೆಂಬರ್ 26, 2020
26 °C
ಕ್ರಿಕೆಟ್: ಇಂಗ್ಲೆಂಡ್‌ ಪ್ರವಾಸಕ್ಕೆ ಮೆಕ್‌ಡೋನಾಲ್ಡ್‌ ಅಲಭ್ಯ

ಐಪಿಎಲ್‌ನಲ್ಲಿ ಸೆ 26ರಿಂದ ಕಣಕ್ಕಿಳಿಯಲಿರುವ ಇಂಗ್ಲೆಂಡ್, ಆಸ್ಟ್ರೇಲಿಯಾ ಆಟಗಾರರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯಲ್ಲಿ ಆಡುವ ಕೆಲವು ಆಟಗಾರು  ಉಭಯ ದೇಶಗಳ ಕೆಲವು ಆಟಗಾರರು ಸೆ 26ರಂದು ಯುಎಇಗೆ ಪ್ರಯಾಣಿಸಲಿದ್ದಾರೆ. 

ಉಭಯ ತಂಡಗಳ ನಡುವಣ ಸರಣಿಯಲ್ಲಿ ಮೂರು ಏಕದಿನ ಮತ್ತು ಮೂರು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ.  ಸೆ. 16ರಂದು ಮುಕ್ತಾಯವಾಗಲಿದೆ. ಅದರ ನಂತರ ಒಂದು ವಾರದ ಪ್ರತ್ಯೇಕವಾಸ ನಿಯಮವನ್ನು ಪಾಲಿಸಲಿದ್ದಾರೆ.

ಎರಡೂ ದೇಶಗಳ ಒಟ್ಟು 29 ಆಟಗಾರರು ಐಪಿಎಲ್‌ನ ಬೇರೆ ಬೇರೆ ತಂಡಗಳಲ್ಲಿ ಆಡಲಿದ್ದಾರೆ. ಅದರಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್‌, ಇಂಗ್ಲೆಂಡ್‌ನ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್‌, ಜೋಸ್ ಬಟ್ಲರ್ ಪ್ರಮುಖರಾಗಿದ್ದಾರೆ. 

ಆಸ್ಟ್ರೇಲಿಯಾ ತಂಡವು ಇದೇ 24ರಂದು ಇಂಗ್ಲೆಂಡ್‌ಗೆ ತಲುಪಲಿದೆ.  ಜೀವ ಸುರಕ್ಷಾ ವಾತಾವರಣದಲ್ಲಿ ಪಂದ್ಯಗಳನ್ನು  ಆಡಲು ಸಜ್ಜಾಗಲಿದೆ.

’ಆಸ್ಟ್ರೇಲಿಯಾ ತಂಡವು ನಮ್ಮ ದೇಶಕ್ಕೆ ಬಂದು ಆಡಲು ಒಪ್ಪಿದೆ. ಅದಕ್ಕಾಗಿ ನಾವು ಕ್ರಿಕೆಟ್ ಆಸ್ಟ್ರೇಲಿಯಾದ ಆಡಳಿತ, ಸಿಬ್ಬಂದಿ ಹಾಗೂ ಆಟಗಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ‘ ಎಂದು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಟಾಮ್ ಹ್ಯಾರಿಸನ್ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಆ್ಯಂಡ್ರ್ಯೂ ಅಲಭ್ಯ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹಿರಿಯ ಸಹಾಯಕ ಕೋಚ್ ಆ್ಯಂಡ್ರ್ಯೂ ಮೆಕ್‌ಡೋನಾಲ್ಡ್ ಅವರು ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುತ್ತಿಲ್ಲ. ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಸೇರಿಕೊಳ್ಳಲಿದ್ದಾರೆ.

’ಮೆಕ್‌ಡೋನಾಲ್ಡ್ ಅವರುಮುಂದಿನ ತಿಂಗಳು ಇಂಗ್ಲೆಂಡ್‌ಗೆ ತೆರಳುತ್ತಿಲ್ಲ. ಅವರು ರಾಜಸ್ಥಾನ ರಾಯಲ್ಸ್‌ ತಂಡದ ಮುಖ್ಯ ಕೋಚ್ ಆಗಿರುವುದರಿಂದ  ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ‘ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೋದ ವರ್ಷ ರಾಜಸ್ಥಾನ ತಂಡಕ್ಕೆ ಆಸ್ಟ್ರೇಲಿಯಾದವರೇ ಆದ ಪ್ಯಾಡಿ ಆಪ್ಟನ್ ಮುಖ್ಯ ಕೋಚ್ ಆಗಿದ್ದರು. ಅವರ ನಿರ್ಗಮನದ ನಂತರ ಆ್ಯಂಡ್ರ್ಯೂ ಆ ಸ್ಥಾನಕ್ಕೆ ಬಂದಿದ್ದಾರೆ. ಆಗಸ್ಟ್ 20ರಂದು ರಾಜಸ್ಥಾನ ತಂಡವು ಯುಎಇಗೆ ಪ್ರಯಾಣಿಸಲಿದೆ.

39 ವರ್ಷದ ಆ್ಯಂಡ್ರ್ಯೂ ಅವರು ನವೆಂಬರ್‌ 10ರಂದು ಐಪಿಎಲ್ ಮುಗಿದ ನಂತರ ಆಸ್ಟ್ರೇಲಿಯಾ ತಂಡಕ್ಕೆ ಮರಳುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು