ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಏಕದಿನ ಪಂದ್ಯ: ಸರಣಿ ಕೈವಶದತ್ತ ಮಾರ್ಗನ್ ಬಳಗದ ಚಿತ್ತ

ಐರ್ಲೆಂಡ್ –ಇಂಗ್ಲೆಂಡ್
Last Updated 31 ಜುಲೈ 2020, 15:16 IST
ಅಕ್ಷರ ಗಾತ್ರ

ಸೌತಾಂಪ್ಟನ್: ಕೊರೊನಾ ಕಾಲದ ಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ಸುಲಭವಾಗಿ ಗೆದ್ದಿರುವ ಇಂಗ್ಲೆಂಡ್ ತಂಡವು ಈಗ ಸರಣಿ ಜಯದ ಮೇಲೆ ಕಣ್ಣಿಟ್ಟಿದೆ.

ಶನಿವಾರ ಐರ್ಲೆಂಡ್ ಎದುರಿನ ಎರಡನೇ ಪಂದ್ಯದಲ್ಲಿ ಮತ್ತೊಂದು ಜಯ ಸಾಧಿಸಿ ಸರಣಿ ಕೈವಶ ಮಾಡಿಕೊಳ್ಳುವ ಛಲದಲ್ಲಿದೆ. ಕೊರೊನಾ ಕಾಲದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಸ್‌ ಸರಣಿಯನ್ನು ಇಂಗ್ಲೆಂಡ್ ಗೆದ್ದಿತ್ತು. ಗುರುವಾರ ನಡೆದಿದ್ದ ಏಕದಿನ ಪಂದ್ಯದಲ್ಲಿ ಡೇವಿಡ್ ವಿಲ್ಲಿ ಅವರ ಅಮೋಘ ಬೌಲಿಂಗ್‌ನಿಂದ ಆತಿಥೇಯ ತಂಡವು ಆರು ವಿಕೆಟ್‌ಗಳಿಂದ ಗೆದ್ದಿತ್ತು.

ವಿಶ್ವ ಚಾಂಪಿಯನ್ ತಂಡವಾಗಿರುವ ಇಂಗ್ಲೆಂಡ್ ತಂಡದಲ್ಲಿ ಅನುಭವಿ ಬೌಲರ್‌ಗಳಾದ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಜೋಫ್ರಾ ಆರ್ಚರ್‌ ಅವರಿಲ್ಲ. ಆದರೆ ವಿಲ್ಲಿ, ಟಾಮ್ ಕರನ್ ಮೋಯಿನ್ ಅಲಿ ತಮ್ಮ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡದ ಆರಂಭಿಕ ಮತ್ತು ಮಧ್ಯಮ ಬ್ಯಾಟಿಂಗ್ ಕ್ರಮಾಂಕವು ಬೇಗನೆ ಕುಸಿದಿತ್ತು. ಆದರೆ, ಕರ್ಟಿಸ್ ಕ್ಯಾಂಪರ್ ಅವರ ಅರ್ಧಶತಕದ ಬಲದಿಂದ ತಂಡವು ಅತ್ಯಲ್ಪ ಮೊತ್ತಕ್ಕೆ ಕುಸಿಯುವುದು ತಪ್ಪಿತ್ತು. ಆ್ಯಂಡ್ರ್ಯೂ ಬಲ್ಬಿರ್ನಿ ಬಳಗವು ತನ್ನ ಲೋಪಗಳನ್ನು ತಿದ್ದಿಕೊಂಡು ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದೆ. ಹಾಂಗೊಂದು ವೇಳೆ ದಿಟ್ಟ ಹೋರಾಟ ಮಾಡಿದರೆ ಪಂದ್ಯ ರೋಚಕವಾಗುವುದು ಖಚಿತ.

ತಂಡಗಳು

ಇಂಗ್ಲೆಂಡ್: ಏಯಾನ್ ಮಾರ್ಗನ್ (ನಾಯಕ), ಜೇಸನ್ ರಾಯ್, ಜಾನಿ ಬೆಸ್ಟೊ (ವಿಕೆಟ್‌ಕೀಪರ್), ಜೇಮ್ಸ್ ವಿನ್ಸಿ, ಮೋಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್‌, ಟಾಮ್ ಬ್ಯಾಂಟನ್, ಆದಿಲ್ ರಶೀದ್, ಟಾಮ್ ಕರನ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ.

ಐರ್ಲೆಂಡ್: ಆ್ಯಂಡ್ರ್ಯೂ ಬಲ್ಬೀರ್ನಿ (ನಾಯಕ), ಕರ್ಟೀಸ್ ಕ್ಯಾಂಪರ್, ಗರೆತ್ ಡೆಲೇನಿ, ಜೋಶ್ ಲಿಟಲ್, ಆ್ಯಂಡ್ರ್ಯೂ ಮೆಕ್‌ಶ್ರೈನ್, ಬೆರ್ರಿ ಮೆಕಾರ್ತಿ, ಕೆವಿನ್ ಓ ಬ್ರೇನ್, ವಿಲಿಯಂ್ ಪೋರ್ಟರ್‌ಫೀಲ್ಡ್, ಬಾಯ್ಡ್ ರಂಕಿನ್, ಸಿಮಿ ಸಿಂಗ್, ಪಾಲ್ ಸ್ಟರ್ಲಿಂಗ್, ಹ್ಯಾರಿ ಟೆಕ್ಟರ್, ಲಾರ್ಕನ್, ಟಕರ್, ಕ್ರೇಗ್ ಯಂಗ್.

ಪಂದ್ಯ ಆರಂಭ: ಸಂಜೆ 6.30 (ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸಿಕ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT