ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಗುತ್ತಿಗೆಯಲ್ಲಿ ಕ್ರಿಕೆಟಿಗರಿಗೆ ನಿರಾಸಕ್ತಿ: ಎಫ್‌ಐಸಿಎ

Last Updated 29 ನವೆಂಬರ್ 2022, 16:28 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಪ್ರಸ್ತುತ ಕ್ರಿಕೆಟ್ ಜಗತ್ತು ಕವಲುಹಾದಿಯಲ್ಲಿದೆ. ವಿಶ್ವದ ಶೇ 49ರಷ್ಟು ಕ್ರಿಕೆಟಿಗರು ತಮ್ಮತಮ್ಮ ದೇಶಗಳ ಕೇಂದ್ರ ಗುತ್ತಿಗೆಯನ್ನು ತಿರಸ್ಕರಿಸಲು ಸಿದ್ಧರಿದ್ದಾರೆ.

ವಿದೇಶಿ ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಆದ್ಯತೆ ನೀಡಿರುವ ವಿಷಯವನ್ನು ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಸ್ಥೆಗಳ ಫೆಡರೇಷನ್ (ಎಫ್‌ಐಸಿಎ) ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಭಾರತ ಕ್ರಿಕೆಟಿಗರ ಸಂಘವು ಈ ಒಕ್ಕೂಟದಲ್ಲಿ ಇಲ್ಲ. ಅಲ್ಲದೇ ಭಾರತದ ಕ್ರಿಕೆಟಿಗರನ್ನೂ ಈ ಸಮೀಕ್ಷೆಯು ಒಳಗೊಂಡಿಲ್ಲ.

ಆದರೆ ಈಚೆಗಿನ ಸಮೀಕ್ಷೆಯ ವರದಿ ಪ್ರಕಾರ,‘ ಶೇ 49ರಷ್ಟು ಆಟಗಾರರಿಗೆ ದೇಶಿ ಲೀಗ್‌ಗಳಲ್ಲಿ ಹೆಚ್ಚು ಆಸಕ್ತಿ ಇದೆ’ ಎನ್ನಲಾಗಿದೆ.

50 ಓವರ್‌ಗಳ ಕ್ರಿಕೆಟ್‌ ಮಾದರಿಗೆ ಜನಪ್ರಿಯತೆ ಕುಗ್ಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೇ ಏಕದಿನ ಮಾದರಿಯಲ್ಲಿ ಆಡಲು ಆಸಕ್ತಿ ತೋರುವ ಆಟಗಾರರ ಸಂಖ್ಯೆಯೂ ಕಡಿಮೆಯಾಗಿದೆ. ಈಗಾಗಲೇ ಕೆಲವು ಪ್ರಮುಖ ಆಟಗಾರರು ತಮ್ಮ ಕೇಂದ್ರ ಗುತ್ತಿಗೆಗಳನ್ನು ಬಿಟ್ಟಿದ್ದಾರೆ.

ಈ ಸನ್ನಿವೇಶದಲ್ಲಿಯೂ ಏಕದಿನ ಮಾದರಿಯ ವಿಶ್ವಕಪ್ ಟೂರ್ನಿಯು ಪ್ರತಿಷ್ಠಿತ ಎಂದು ಪರಿಗಣಿಸುವವರೂ ಇದ್ದಾರೆ.

‘ಐಸಿಸಿ ಟೂರ್ನಿಗಳಿಗೆ ಏಕದಿನ ವಿಶ್ವಕಪ್ ಟೂರ್ನಿ ಕಿರೀಟಪ್ರಾಯವಾಗಿದೆ ಎಂದು ಶೇ 54ರಷ್ಟು ಕ್ರಿಕೆಟಿಗರು ಹೇಳುತ್ತಾರೆ. ಆದರೆ 2018ರಲ್ಲಿ ನಡೆದ ಸಮೀಕ್ಷೆಗಿಂತಲೂ ಇದು ಕಡಿಮೆ’ ಎಂದೂ ಉಲ್ಲೇಖಿಸಲಾಗಿದೆ.

‘ಇಂದಿನ ಕಾಲಘಟ್ಟದಲ್ಲಿ ಒಂದು ತಂಡಕ್ಕೆ ಸೀಮಿತವಾಗದೇ ‘ಫ್ರೀ ಏಜೆಂಟ್’ ಆಗಿ ಕ್ರಿಕೆಟ್‌ನಲ್ಲಿರುವತ್ತ ಬಹಳ ಆಟಗಾರರು ಒಲವು ತೋರಿದ್ದಾರೆ. ಸದ್ಯ ಟಿ20 ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡಿರುವ ಟಾಪ್ 100 ಆಟಗಾರರಲ್ಲಿ 82 ಮಂದಿಯ ಅಭಿಪ್ರಾಯವೂ ಇದೇ ಆಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT