ಭಾರತ ತಂಡ 1932ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿದೆ. ಅಂದಿನಿಂದ ಇಂದಿನವರೆಗೂ ಟೀಂ ಇಂಡಿಯಾ 581 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇವುಗಳ ಪೈಕಿ 179 ಟೆಸ್ಟ್‌ಗಳಲ್ಲಿ ಗೆಲುವು ದಾಖಲಿಸಿದ್ದರೆ 178ರಲ್ಲಿ ಸೋಲು ಕಂಡಿತ್ತು.
ಬಾಂಗ್ಲಾದೇಶದ ವಿರುದ್ಧ ಅಮೋಘ ಜಯ ದಾಖಲಿಸುವ ಮೂಲಕ ಸೋಲುಗಳ ಸಂಖ್ಯೆಗಳಿಗಿಂತ ಗೆಲುವಿನ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಂಡಿರುವುದು ಹೊಸ ದಾಖಲೆಯಾಗಿದೆ.
ಟೆಸ್ಟ್ ಆಡುವ ವಿವಿಧ ದೇಶಗಳ ಮಾಹಿತಿ...
* ಆಸ್ಟ್ರೇಲಿಯಾ: 414 ಗೆಲುವು, 232 ಸೋಲು
* ಇಂಗ್ಲೆಂಡ್: 397 ಗೆಲುವು, 325 ಸೋಲು
* ದಕ್ಷಿಣ ಆಫ್ರಿಕಾ: 179 ಗೆಲುವು, 161 ಸೋಲು
* ಭಾರತ: 179 ಗೆಲುವು, 178 ಸೋಲು
* ಪಾಕಿಸ್ತಾನ: 148 ಗೆಲುವು, 144 ಸೋಲು