ಅಹಮದಾಬಾದ್: ಮೊಟೇರಾ ಕ್ರೀಡಾಂಗಣದ ಪಿಚ್ ಕುರಿತು ಕೆಲವು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ’ಪಿಚ್ ಉತ್ತಮವಾಗಿಯೇ ಇದೆ. ಆದರೆ, ಬ್ಯಾಟ್ಸ್ಮನ್ಗಳು ಕೌಶಲಭರಿತ ಮತ್ತು ಉತ್ತಮ ದರ್ಜೆಯ ಆಟವಾಡಲಿಲ್ಲ‘ ಎಂದು ಅಭಿಪ್ರಾಯಪಟ್ಟಿದ್ಧಾರೆ.

’ನಾವು ಮೊದಲ ಇನಿಂಗ್ಸ್ನಲ್ಲಿ 100ಕ್ಕೆ ಮೂರು ವಿಕೆಟ್ ಕಳೆದುಕೊಂಡಿದ್ದೆವು. ಆದರೆ, 150ಕ್ಕೆ ಮೊತ್ತ ಮುಟ್ಟುವ ಮುನ್ನವೇ ಆಲೌಟ್ ಆದೆವು. ಇದು ಬ್ಯಾಟಿಂಗ್ ವಿಭಾಗದ ದೌರ್ಬಲ್ಯ. ಬ್ಯಾಟಿಂಗ್ ಮಾಡಲು ಈ ಪಿಚ್ ಉತ್ತಮವಾಗಿದೆ‘ ಎಂದು ಕೊಹ್ಲಿ ಹೇಳಿದರು.

ರೂಟ್ ಅಭಿಪ್ರಾಯ: ಪಿಚ್ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿರ್ಧರಿಸಬೇಕು. ಆಟಗಾರರಲ್ಲ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹೇಳಿದರು.

ಪಿಚ್ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲು ನಿರಾಕರಿಸಿದ ಅವರು, ’ಇದು ಸವಾಲಿನ ಅಂಗಣವಾಗಿತ್ತು. ಉಭಯ ತಂಡಗಳ ಬ್ಯಾಟ್ಸ್ಮನ್ಗಳು ಅದಕ್ಕೆ ಹೊಂದಿಕೊಂಡು ಆಡಲಿಲ್ಲ‘ ಎಂದರು.

ಟೆಸ್ಟ್ಗೆ ಸೂಕ್ತವಲ್ಲ: ಮೊಟೇರಾ ಪಿಚ್ ಟೆಸ್ಟ್ ಕ್ರಿಕೆಟ್ಗೆ ಸೂಕ್ತವಲ್ಲ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮತ್ತು ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸುನಿಲ್ ಗಾವಸ್ಕರ್, ’ಬ್ಯಾಟ್ಸ್ಮನ್ಗಳು ಸ್ವಯಂ ಲೋಪಗಳಿಂದ ಔಟಾಗಿದ್ದಾರೆ. ಪಿಚ್ ನಲ್ಲಿ ಯಾವ ಕೆಡಕೂ ಇಲ್ಲ‘ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.