ಸೈಕ್ಲಿಸ್ಟ್‌ಗಳಿಗೆ ಹುರುಪು ತುಂಬಿದ ಗಂಭೀರ್‌

7

ಸೈಕ್ಲಿಸ್ಟ್‌ಗಳಿಗೆ ಹುರುಪು ತುಂಬಿದ ಗಂಭೀರ್‌

Published:
Updated:
Deccan Herald

ಬೆಂಗಳೂರು: ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ನೂರಾರು ಕಿಲೋಮೀಟರ್‌ ದೂರ ಸೈಕಲ್ ತುಳಿದು ಬಂದ ಮಹಿಳಾ ಸೈಕ್ಲಿಸ್ಟ್‌ಗಳಿಗೆ ಕ್ರಿಕೆಟಿಗ ಗೌತಮ್‌ ಗಂಭೀರ್ ಹುರುಪು ತುಂಬಿದರು. ನವೆಂಬರ್‌ 30ರಂದು ಮುಂಬೈಯಲ್ಲಿ ಆರಂಭಗೊಂಡ ಸೈಕ್ಲಾಥಾನ್‌ ನಗರದ ಥಣಿಸಂದ್ರದಲ್ಲಿರುವ ಬಿಎಫ್‌ಎಸ್‌ಐ ಆವರಣದ ಗ್ಲೋಬಲ್ ಅಕಾಡೆಮಿಯಲ್ಲಿ ಸೋಮವಾರ ಮುಕ್ತಾಯಗೊಂಡಿತು.

ಪುಣೆ, ಸತಾರ, ಕೊಲ್ಹಾಪುರ, ಬೆಳಗಾವಿ, ಹುಬ್ಬಳ್ಳಿ, ರಾಣೆಬೆನ್ನೂರು, ಚಿತ್ರದುರ್ಗ ಮತ್ತು ತುಮಕೂರು ಮೂಲಕ ಸೈಕ್ಲಿಸ್ಟ್‌ಗಳು ಬೆಂಗಳೂರು ತಲುಪಿದ್ದರು. ಹೈದರಾಬಾದ್‌ನಲ್ಲಿರುವ ಉದ್ಭವ್ ಶಾಲೆಗಾಗಿ ಹಣ ಸಂಗ್ರಹಿಸುವುದು ಸೈಕ್ಲಾಥಾನ್‌ನ ಉದ್ದೇಶವಾಗಿತ್ತು.

ಸಮಾರೋಪ ಕಾರ್ಯಕ್ರಮದಲ್ಲಿ ರಾಜಯ ಪೊಲೀಸ್‍ ಮಹಾನಿರ್ದೇಶಕಿ ನೀಲಮಣಿ ರಾಜು, ಆರ್‍.ಬಿ.ಎಲ್ ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಅಹುಜಾ, ಮಣಿಪಾಲ್ ಗ್ಲೋಬಲ್ ಎಜುಕೇಷನ್ ಸರ್ವಿಸಸ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಪಂಚನಾಥನ್  ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !