ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ಉಮೇಶ್‌, ಅಶ್ವಿನ್‌

ಕ್ಯಾಮರೂನ್‌ ಗ್ರೀನ್‌ ಶತಕ: ಆಸ್ಟ್ರೇಲಿಯಾ ಎ ತಂಡಕ್ಕೆ ಮುನ್ನಡೆ
Last Updated 7 ಡಿಸೆಂಬರ್ 2020, 14:08 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸ್ಥಾನ ಪಡೆಯುವ ಹಂಬದಲ್ಲಿರುವ ವೇಗಿ ಉಮೇಶ್ ಯಾದವ್ (44ಕ್ಕೆ 3) ಹಾಗೂ ಸ್ಪಿನ್ನರ್‌ ಆರ್‌.ಅಶ್ವಿನ್ (58ಕ್ಕೆ 2) ಆಸ್ಟ್ರೇಲಿಯಾ ಎ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡದ ಪರ ಉತ್ತಮ ದಾಳಿ ಸಂಘಟಿಸಿದರು. ಆದರೆ ಕ್ಯಾಮರೂನ್ ಗ್ರೀನ್‌ ಅವರ ಶತಕದ (ಬ್ಯಾಟಿಂಗ್‌ 114) ಬಲದಿಂದ ಆತಿಥೇಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 39 ರನ್‌ಗಳ ಮುನ್ನಡೆ ಗಳಿಸಿದೆ.

ಪಂದ್ಯದ ಎರಡನೇ ದಿನವಾದ ಸೋಮವಾರ ಮೊದಲ ಇನಿಂಗ್ಸ್ ಆಟ ಮುಂದುವರಿಸಿದ ಭಾರತ ‘ಎ‘ ತಂಡ 247 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 108 ರನ್‌ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಅಜಿಂಕ್ಯ ರಹಾನೆ (ಔಟಾಗದೆ 117) ತಮ್ಮ ಮೊತ್ತಕ್ಕೆ 9 ರನ್ ಸೇರಿಸಿದರು.

ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಎ ತಂಡಕ್ಕೆ ಉಮೇಶ್‌ ಆರಂಭದಲ್ಲೇ ಪೆಟ್ಟು ನೀಡಿದರು. ವಿಲ್ ಪುಕೊವ್‌ಸ್ಕಿ (1) ಹಾಗೂ ಜೋ ಬರ್ನ್ಸ್ (4) ವಿಕೆಟ್‌ಗಳು ಬಿದ್ದಾಗ ತಂಡದ ಮೊತ್ತ ಕೇವಲ ಐದು ರನ್‌ಗಳಾಗಿತ್ತು.

98 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡ ತಂಡ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ ಆರನೇ ವಿಕೆಟ್ ಜೊತೆಯಾಟದಲ್ಲಿ ಗ್ರೀನ್‌ ಹಾಗೂ ಟಿಮ್‌ ಪೇನ್‌ (44) 104 ರನ್ ಸೇರಿಸಿ ಆಸರೆಯಾದರು. ಮಾರ್ಕಸ್ ಹ್ಯಾರಿಸ್‌ (35) ಹಾಗೂ ಮೈಕೆಲ್ ನೇಸೆರ್‌ (33) ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ಎ : 93 ಓವರ್‌ಗಳಲ್ಲಿ 9ಕ್ಕೆ 247 ಡಿಕ್ಲೇರ್‌ (ಭಾನುವಾರ 8 ವಿಕೆಟ್‌ಗೆ 237): (ಅಜಿಂಕ್ಯ ರಹಾನೆ ಔಟಾಗದೆ 117, ಚೇತೇಶ್ವರ ಪೂಜಾರ 54; ಜೇಮ್ಸ್ ಪ್ಯಾಟಿನ್ಸನ್‌ 58ಕ್ಕೆ 3, ಮೈಕೆಲ್‌ ನೇಸೆರ್‌ 55ಕ್ಕೆ 2, ಟ್ರಾವಿಸ್‌ ಹೆಡ್‌ 24ಕ್ಕೆ 2) ಆಸ್ಟ್ರೇಲಿಯಾ ಎ: 85 ಓವರ್‌ಗಳಲ್ಲಿ 8 ವಿಕೆಟ್‌ಗೆ 286 (ಕ್ಯಾಮರೂನ್ ಗ್ರೀನ್‌ ಔಟಾಗದೆ 114,ಟಿಮ್ ಪೇನ್‌ 44, ಮಾರ್ಕಸ್ ಹ್ಯಾರಿಸ್‌ 35, ಮೈಕೆಲ್‌ ನೇಸೆರ್‌ 33; ಉಮೇಶ್ ಯಾದವ್‌ 44ಕ್ಕೆ 3, ಆರ್‌.ಅಶ್ವಿನ್ 58ಕ್ಕೆ 2, ಮೊಹಮ್ಮದ್ ಸಿರಾಜ್‌ 71ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT