ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕರ ಘಟ್ಟಕ್ಕೆ ಗುಜರಾತ್

Last Updated 23 ಫೆಬ್ರುವರಿ 2020, 19:51 IST
ಅಕ್ಷರ ಗಾತ್ರ

ವಲ್ಸಾಡ್: ಪಂದ್ಯದುದ್ದಕ್ಕೂ ಪಾರಮ್ಯ ಮೆರೆದ ಗುಜರಾತ್ ತಂಡವು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತು.

ಭಾನುವಾರ ಇಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಗುಜರಾತ್ ತಂಡವು 464 ರನ್‌ಗಳ ಭಾರಿ ಅಂತರದಿಂದ ಗೋವಾ ವಿರುದ್ಧ ಜಯಿಸಿತು. 628 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ್ದ ಗೋವಾ ತಂಡವು 164 ರನ್‌ ಗಳಿಸಲು ಮಾತ್ರ ಶಕ್ತವಾಯಿತು.

ಸೌರಾಷ್ಟ್ರ ಮತ್ತು ಆಂಧ್ರ ನಡುವಣ ಪಂದ್ಯದಲ್ಲಿ ಅರ್ಹತೆ ಗಳಿಸುವ ತಂಡದ ಎದುರು ಗುಜರಾತ್‌ ನಾಲ್ಕರ ಘಟ್ಟದಲ್ಲಿ ಸೆಣಸಲಿದೆ. ಸೌರಾಷ್ಟ್ರ ತಂಡವು ಈಗಾಗಲೇ ಮೊದಲ ಇನಿಂಗ್ಸ್‌ನಲ್ಲಿ ಭಾರಿ ಮುನ್ನಡೆ ಗಳಿಸಿ, ಸುಭದ್ರ ಸ್ಥಿತಿಯಲ್ಲಿದೆ.

ಸಂಕ್ಷಿಪ್ತ ಸ್ಕೋರುಗಳು: ಮೊದಲ ಇನಿಂಗ್ಸ್‌ ಗುಜರಾತ್ 161.3 ಓವರ್‌ಗಳಲ್ಲಿ 8ಕ್ಕೆ602 ಡಿಕ್ಲೇರ್ಡ್‌, ಗೋವಾ: 57.5 ಓವರ್‌ಗಳಲ್ಲಿ 175, ಎರಡನೇ ಇನಿಂಗ್ಸ್: 64.2 ಓವರ್‌ಗಳಲ್ಲಿ 6ಕ್ಕೆ 199ಡಿಕ್ಲೆರ್ಡ್: ಗೋವಾ: 66.4 ಓವರ್‌ಗಳಲ್ಲಿ 164 (ಸುಯಶ್ ಪ್ರಭುದೇಸಾಯಿ 66, ದರ್ಶನ್ ಮಿಸಾಳ್ ಔಟಾಗದೆ 46, ಅರ್ಜನ್ ನಾಗವಾಸ್ವಲಾ 18ಕ್ಕೆ4, ಸಿದ್ಧಾರ್ಥ್ ದೇಸಾಯಿ 81ಕ್ಕೆ5) ಫಲಿತಾಂಶ: ಗುಜರಾತ್ ತಂಡಕ್ಕೆ 464 ರನ್‌ಗಳ ಜಯ.

ಓಂಗೋಲ್: ಮೊದಲ ಇನಿಂಗ್ಸ್: ಸೌರಾಷ್ಟ್ರ: 146.5 ಓವರ್‌ಗಳಲ್ಲಿ 419, ಆಂಧ್ರ: 78.2 ಓವರ್‌ಗಳಲ್ಲಿ 136, ಎರಡನೇ ಇನಿಂಗ್ಸ್: ಸೌರಾಷ್ಟ್ರ: 123 ಓವರ್‌ಗಳಲ್ಲಿ 9ಕ್ಕೆ375 (ಪ್ರೇರಕ್ ಮಂಕಡ್ 85, ಧರ್ಮೇಂದ್ರಸಿಂಹ ಜಡೇಜ 60,ಸಮದ್ ರಫಿ 92ಕ್ಕೆ3, ಸ್ಟೀಫನ್ 44ಕ್ಕೆ2)

ಕಟಕ್: ಮೊದಲ ಇನಿಂಗ್ಸ್: ಬಂಗಾಳ: 332, ಒಡಿಶಾ: 250, ಎರಡನೇ ಇನಿಂಗ್ಸ್: ಬಂಗಾಳ: 132 ಓವರ್‌ಗಳಲ್ಲಿ 7ಕ್ಕೆ361 (ಅಭಿಷೇಕ್ ಕುಮಾರ್ ರಾಮನ್ 67, ಶ್ರೀವತ್ಸ್ ಗೋಸ್ವಮಿ 78, ಶಹಭಾಜ್ ಔಟಾಗದೆ 52, ಅರ್ಣವ್ ನಂದಿ 45, ಗೋವಿಂದ್ ಪೋದ್ದಾರ್ 95ಕ್ಕೆ3, ಅನುರಾಗ್ ಸಾರಂಗಿ 26ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT