ಉತ್ತರಪ್ರದೇಶ–ಗುಜರಾತ್ ಜಂಟಿ ಚಾಂಪಿಯನ್

7
ಕ್ಯಾಪ್ಟನ್‌ ತಿಮ್ಮಪ್ಪಯ್ಯ ಕ್ರಿಕೆಟ್ ಟೂರ್ನಿ

ಉತ್ತರಪ್ರದೇಶ–ಗುಜರಾತ್ ಜಂಟಿ ಚಾಂಪಿಯನ್

Published:
Updated:

ಬೆಂಗಳೂರು: ಉತ್ತರ ಪ್ರದೇಶ ಮತ್ತು ಗುಜರಾತ್ ತಂಡಗಳು ಸೋಮವಾರ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಅಖಿಲ ಭಾರತ ಕ್ರಿಕೆಟ್‌ ಟೂರ್ನಿಯಲ್ಲಿ ಜಂಟಿ ಚಾಂಪಿಯನ್ ಆದವು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದ ಎರಡನೇ ಮೈದಾನದಲ್ಲಿ ಆಗಸ್ಟ್‌ 10ರಂದು ಫೈನಲ್ ಆರಂಭವಾಗಿತ್ತು.ಮೊದಲು ಬ್ಯಾಟಿಂಗ್ ಮಾಡಿದ್ದ  ಉತ್ತರ ಪ್ರದೇಶ ತಂಡವು 165 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 625 ರನ್‌ಗಳ ಬೃಹತ್ ಮೊತ್ತ ಪೇರಿಸಿ ಶನಿವಾರ ಡಿಕ್ಲೇರ್ ಮಾಡಿತ್ತು. ಅದಕ್ಕುತ್ತರವಾಗಿ ಆಮೆಗತಿಯ ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 89 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 250 ರನ್‌ ಗಳಿಸಿತು. ಇದರಿಂದಾಗಿ ಪಂದ್ಯದ ಅಂತ್ಯಕ್ಕೆ ಉತ್ತರ ಪ್ರದೇಶಕ್ಕೆ ಇನಿಂಗ್ಸ್‌ ಮುನ್ನಡೆ ಲಭಿಸಲಿಲ್ಲ. ಆದ್ದರಿಂದ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಯಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆ: 161 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 625 ಡಿಕ್ಲೆರ್ಡ್‌: ಗುಜರಾತ್ ಕ್ರಿಕೆಟ್ ಸಂಸ್ಥೆ: 89 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 250 (ಭಾರ್ಗವ್ ಮೆರೈ  ಔಟಾಗದೆ 150, ಕ್ಷಿತಿಜ್ ಪಟೇಲ್ 38, ರುಜುಲ್ ಭಟ್ ಔಟಾಗದೆ 19) ಫಲಿತಾಂಶ: ಪಂದ್ಯ ಡ್ರಾ. ಉಭಯ ತಂಡಗಳಿಗೆ ಜಂಟಿ ಚಾಂಪಿಯನ್‌ಷಿಪ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !