ಗಿಲ್‌ಗೆ ಫಿಟ್ನೆಸ್ ಪರೀಕ್ಷೆ:
ಭಾರತ ಟಿ20 ಕ್ರಿಕೆಟ್ ತಂಡದ ಉಪ ನಾಯಕ ಶುಭಮನ್ ಗಿಲ್ ಅವರು ಸೋಮವಾರ ಬೆಂಗಳೂರಿನ ಬಿಸಿಸಿಐ ಉತ್ಕೃಷ್ಟತಾ ಕೇಂದ್ರದಲ್ಲಿ ಫಿಟ್ನೆಸ್ ಪರೀಕ್ಷೆ ಎದುರಿಸಿದ್ದಾರೆ.
ಕೋಲ್ಕತ್ತದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್ ಅವರು ಬ್ಯಾಟಿಂಗ್ ಮಾಡುವಾಗ ಕುತ್ತಿಗೆಯ ಸ್ನಾಯುಸೆಳೆತಕ್ಕೊಳಗಾಗಿದ್ದರು. ಅದರಿಂದಾಗಿ ಅವರು ಮೈದಾನ ತೊರೆದು ಚಿಕಿತ್ಸೆಗಾಗಿ ತೆರಳಿದ್ದರು.