ಬುಧವಾರ, ಆಗಸ್ಟ್ 17, 2022
25 °C

ಟೆಸ್ಟ್‌ ಕ್ರಿಕೆಟ್: 2016ರಲ್ಲಿ ಉತ್ತುಂಗ; ಈಗ ಪ್ರಪಾತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಡಿಲೇಡ್: ಭಾರತ ತಂಡವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ದೊಡ್ಡ ಮೊತ್ತ ಗಳಿಸಿದ್ದು ಮತ್ತು ಕನಿಷ್ಠ ಮೊತ್ತ ದಾಖಲಿಸಿದ್ದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ.

ಕಾಕತಾಳೀಯವೆಂಬಂತೆ ಗರಿಷ್ಠ ಮೊತ್ತ ದಾಖಲಿಸಿದ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಕನಿಷ್ಠ ಮೊತ್ತವೂ ಇತಿಹಾಸದ ಪುಟ ಸೇರಿತು.

2016ರ ಡಿಸೆಂಬರ್‌ 19ರಂದು ಚೆನ್ನೈನಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ 7 ವಿಕೆಟ್‌ಗಳಿಗೆ 759 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆ ಪಂದ್ಯದಲ್ಲಿ ಕರ್ನಾಟಕದ ಕರುಣ್ ನಾಯರ್ ತ್ರಿಶತಕ (ಅಜೇಯ 303) ಬಾರಿಸಿದ್ದರು. ಕೆ.ಎಲ್. ರಾಹುಲ್ (199 ರನ್) ಕೇವಲ ಒಂದು ರನ್‌ನಿಂದ ದ್ವಿಶತಕ ತಪ್ಪಿಸಿಕೊಂಡಿದ್ದರು. ಭಾರತ ತಂಡವು ಇನಿಂಗ್ಸ್ ಮತ್ತು 75 ರನ್‌ಗಳಿಂದ ಗೆದ್ದಿತ್ತು. 

ನಾಲ್ಕು ವರ್ಷಗಳ ನಂತರ ಅದೇ ದಿನ ಅಡಿಲೇಡ್‌ನಲ್ಲಿ ಕೇವಲ 36 ರನ್‌ ಗಳಿಗೆ ತಂಡವು ಪತನಗೊಂಡಿತು. ಆದರೆ ಈ ಬಾರಿ ತಂಡದಲ್ಲಿ ಕರುಣ್ ನಾಯರ್ ಇಲ್ಲ. ಕೆ. ಎಲ್‌. ರಾಹುಲ್ ಬೆಂಚ್‌ನಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು