ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣಭೇದ ನೀತಿ ವಿರುದ್ಧದ ನಿಯಮಗಳು ಗಾಯದ ಮೇಲಿನ ಪ್ಲಾಸ್ಟರ್ ಇದ್ದಂತೆ‌: ಹೋಲ್ಡಿಂಗ್

ವೆಸ್ಟ್‌ ಇಂಡೀಸ್‌ನ ಹಿರಿಯ ಕ್ರಿಕೆಟಿಗ ಮೈಕೆಲ್‌ ಹೋಲ್ಡಿಂಗ್‌ ಅಭಿಪ್ರಾಯ
Last Updated 8 ಜೂನ್ 2020, 4:59 IST
ಅಕ್ಷರ ಗಾತ್ರ

ನವದೆಹಲಿ: ವರ್ಣಭೇದ ನೀತಿಯ ವಿರುದ್ಧ ಕ್ರೀಡಾ ಕ್ಷೇತ್ರದಲ್ಲಿರುವ ನಿಯಮಗಳು ಕೇವಲ ‘ಗಾಯದ ಮೇಲೆ ಸುತ್ತಿದ ಪ್ಲಾಸ್ಟರ್‌’ ಇದ್ದಂತೆ ಎಂದು ವೆಸ್ಟ್‌ ಇಂಡೀಸ್‌ನ ಹಿರಿಯ ಕ್ರಿಕೆಟಿಗ ಮೈಕೆಲ್‌ ಹೋಲ್ಡಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ ಆಫ್ರೊ–ಅಮೆರಿಕನ್‌ ಜಾರ್ಜ್‌ ಫ್ಲಾಯ್ಡ್‌ ಅವರ ಸಾವಿನ ಬಳಿಕ ಜಗತ್ತಿನಾದ್ಯಂತ ಜನಾಂಗೀಯತೆಯ ವಿರುದ್ಧ ಆಂದೋಲನ ನಡೆಯುತ್ತಿದೆ. ಈ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಹೋಲ್ಡಿಂಗ್‌ ಈ ಮಾತುಗಳನ್ನಾಡಿದ್ದಾರೆ.

‘ಕ್ರಿಕೆಟ್‌, ಫುಟ್‌ಬಾಲ್‌ ಮೈದಾನಗಳಲ್ಲಿ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಎದುರಾಗಬಹುದು. ವೈಯಕ್ತಿಕ ಕ್ರೀಡೆಗಳಲ್ಲಿ ಈ ತಾರತಮ್ಯವನ್ನು ತಡೆಯಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಸಮಾಜವನ್ನು ಎದುರಿಸುವ ಬಗೆ ಕಲಿತುಕೊಳ್ಳಬೇಕು’ ಎಂದು ಭಾನುವಾರ ರಾತ್ರಿ ನಡೆದ ಇನ್ಸ್ಟಾಗ್ರಾಂ ಸಂವಾದವೊಂದರಲ್ಲಿ ಹೋಲ್ಡಿಂಗ್‌ ಹೇಳಿದ್ದಾರೆ.

‘ತಾರತಮ್ಯವೆಂಬುದು ಸ್ವೀಕಾರಾರ್ಹವಲ್ಲ ಎಂಬ ಅರಿವು ಸಮಾಜಕ್ಕೆ ಇರಬೇಕು’ ಎಂದೂ ಅವರು ನುಡಿದರು.

ವೆಸ್ಟ್‌ ಇಂಡೀಸ್‌ ತಂಡದ ಪರ 1975–87ರ ಅವಧಿಯಲ್ಲಿ 60 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಹೋಲ್ಡಿಂಗ್‌ ಅವರು 249 ವಿಕೆಟ್‌ಗಳನ್ನು ಗಳಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ತಂಡದವರೇ ಆದ ಡರೆನ್‌ ಸಾಮಿ ಹಾಗೂ ಕ್ರಿಸ್‌ ಗೇಲ್‌ ಅವರೂ ಇತ್ತೀಚೆಗೆ ಜನಾಂಗೀಯ ತಾರತಮ್ಯದ ವಿರುದ್ಧ ನಡೆಯುತ್ತಿರುವ ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಅಭಿಯಾನವನ್ನು ಬೆಂಬಲಿಸಿ ಧ್ವನಿಯೆತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT