ಕೋಲ್ಕತ್ತ: ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ 38 ಶತಕಗಳನ್ನು ಸಿಡಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಗಳಿಸಬಹುದಾಗಿದ್ದ ಮತ್ತಷ್ಟು ಶತಕಗಳನ್ನು ಮಿಸ್ ಮಾಡಿಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

311 ಏಕದಿನ ಮತ್ತು 113 ಟೆಸ್ಟ್ ಪಂದ್ಯಗಳಿಂದ ಒಟ್ಟಾರೆ 18,575 ರನ್ ಸಿಡಿಸಿರುವ ಗಂಗೂಲಿ, ತಾವು ಆಡುತ್ತಿದ್ದ ಸಮಯದಲ್ಲಿ ಗಳಿಸಬಹುದಾಗಿದ್ದ ಮತ್ತಷ್ಟು ಶತಕಗಳನ್ನು ಮಿಸ್ ಮಾಡಿಕೊಂಡ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ನಿಮ್ಮ ವೃತ್ತಿಜೀವನದ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಡಿಮೆ ಶತಕಗಳನ್ನು ಗಳಿಸಿದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ನಾನು ಬಹಳಷ್ಟು ಶತಕಗಳನ್ನು ತಪ್ಪಿಸಿಕೊಂಡೆ, ನಾನು ಇನ್ನೂ ಹೆಚ್ಚಿನ ಶತಕಗಳನ್ನು ಗಳಿಸಬೇಕಾಗಿತ್ತು. ಹಲವು 80 ಮತ್ತು 90 ರನ್ಗೆ ಔಟ್ ಆಗಿದ್ದೇನೆ. ಅವುಗಳನ್ನು ಶತಕಗಳಾಗಿ ಪರಿವರ್ತಿಸಿದ್ದರೆ, ಸಲೀಸಾಗಿ ನಾನು 50ಕ್ಕೂ ಹೆಚ್ಚು ಶತಕಗಳನ್ನು ಮಾಡಬಹುದಿತ್ತು ಎಂದು ಪಿಟಿಐ ಸಂದರ್ಶನದಲ್ಲಿ ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ ಗಂಗೂಲಿ, 30 ಬಾರಿ 80, 90 ರನ್ಗೆ ಔಟ್ ಆಗಿದ್ದಾರೆ.

ನಾನು ಒಬ್ಬನೇ ಇದ್ದಾಗಲೆಲ್ಲ ನನ್ನ ಹಳೆಯ ಬ್ಯಾಟಿಂಗ್ ವಿಡಿಯೊಗಳನ್ನು ನೋಡುತ್ತೇನೆ. ಆಗ ಮತ್ತಷ್ಟು ಶತಕಗಳನ್ನು ಗಳಿಸುವಲ್ಲಿ ನಾನು ಎಷ್ಟು ಹತ್ತಿರದಲ್ಲಿದ್ದೆ ಎಂಬುದನ್ನು ಆ ವಿಡಿಯೊಗಳು ನನಗೆ ನೆನಪಿಸುತ್ತವೆ ಎಂದಿದ್ದಾರೆ.

‘ಮಗಳು ಸನಾ ಲಂಡನ್ನಲ್ಲಿ ಇರುವುದರಿಂದ ನನ್ನ ಹೆಂಡತಿ ಲಂಡನ್ಗೆ ತೆರಳಿದಾಗ, ನಾನು ಯೂಟ್ಯೂಬ್ನಲ್ಲಿ ಹಳೆಯ ಪಂದ್ಯಗಳನ್ನು ನೋಡುತ್ತೇನೆ. 'ಅರೇ ಫಿರ್ 70 ಪೆ ಔಟ್ ಹೋ ಗಯಾ' (ಅಯ್ಯೊ ಮತ್ತೆ 70ರಲ್ಲಿ ಔಟ್ ಆದೆ) ಶತಕ ಗಳಿಸಬೇಕಿತ್ತು ಎಂದುಕೊಳ್ಳುತ್ತೇನೆ. ಆದರೆ, ಈಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.’ಎಂದಿದ್ದಾರೆ.

ಏಕದಿನ ಕ್ರಿಕೆಟ್ನಲ್ಲಿ 72 ಅರ್ಧ ಶತಕಗಳನ್ನು ಗಳಿಸಿರುವ ಗಂಗೂಲಿ, ಟೆಸ್ಟ್ನಲ್ಲಿ 35 ಅರ್ಧ ಶತಕ ಸಿಡಿಸಿದ್ದಾರೆ.

ಇದೇವೇಳೆ, ಅನಿಲ್ ಕುಂಬ್ಳೆಯವರನ್ನು ಕೆಲವು ಬಾರಿ ತಂಡದಿಂದ ಕೈಬಿಟ್ಟಿದ್ದು ವಿಷಾದಕರ ಎಂದೂ ಹೇಳಿದ್ದಾರೆ. ಕುಂಬ್ಳೆ ಉತ್ತಮ ಆಟಗಾರರಾಗಿದ್ದರು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.