ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC: ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಪಂತ್, ಹಾರ್ದಿಕ್

Published 1 ಜೂನ್ 2024, 16:17 IST
Last Updated 1 ಜೂನ್ 2024, 16:17 IST
ಅಕ್ಷರ ಗಾತ್ರ

ನ್ಯೂಯಾರ್ಕ್: ರಿಷಭ್ ಪಂತ್ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ ಮಿಂಚಿನ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶನಿವಾರ ಬಾಂಗ್ಲಾ ಎದುರು ನಡೆದ ಅಭ್ಯಾಸ ಪಂದ್ಯದಲ್ಲಿ ಹೋರಾಟದ ಮೊತ್ತ ಗಳಿಸಿತು. 

ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 

ರಿಷಭ್ (53; 32ಎ, 4X4, 6X4) ಹಾಗೂ ಪಾಂಡ್ಯ (ಔಟಾಗದೆ 40; 23ಎ, 4X2, 6X4) ಅವರ ಮಿಂಚಿನ ಬ್ಯಾಟಿಂಗ್‌ನಿಂದ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 182 ರನ್ ಗಳಿಸಿತು. 

ಆದರೆ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಎರಡನೇ ಓವರ್‌ನಲ್ಲಿಯೇ ಸಂಜು ಸ್ಯಾಮ್ಸನ್ (1 ರನ್) ಅವರನ್ನು ಶರಿಫುಲ್  ಇಸ್ಲಾಂ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಈ ಹಂತದಲ್ಲಿ ರೋಹಿತ್ (23; 19ಎ) ಜೊತೆಗೂಡಿದ ಪಂತ್ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 48 ರನ್ ಸೇರಿಸಿದರು. 

ಏಳನೇ ಓವರ್‌ನಲ್ಲಿ ರೋಹಿತ್  ಔಟಾದರು. ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ (31; 18ಎ) ಅವರು ಕಾಣಿಕೆ ನೀಡಿದರು. ಶಿವಂ ದುಬೆ (14; 16ಎ) ಒಂದು ಸಿಕ್ಸರ್ ಹೊಡೆದರು. ಆದರೆ ಆವರ ಆಟದಲ್ಲಿ ವೇಗ ಇರಲಿಲ್ಲ. ಹಾರ್ದಿಕ್ ಮಾತ್ರ ನಾಲ್ಕು ಸಿಕ್ಸರ್ ಸಿಡಿಸಿ ಮಿಂಚಿದರು. 

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 182 (ರೋಹಿತ್ ಶರ್ಮಾ 23, ರಿಷಭ್ ಪಂತ್ ಗಾಯಗೊಂಡು ನಿವೃತ್ತಿ 53, ಸೂರ್ಯಕುಮಾರ್ ಯಾದವ್ 31, ಹಾರ್ದಿಕ್ ಪಾಂಡ್ಯ ಔಟಾಗದೆ 40, ಮೆಹದಿ ಹಸನ್ 22ಕ್ಕೆ1, ಶರೀಫುಲ್ ಇಸ್ಲಾಂ 26ಕ್ಕೆ1) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT