ಕಿವೀಸ್ಗೆ ಕೂದಲೆಳೆ ದೂರದಲ್ಲಿ ಐಸಿಸಿ ಅಗ್ರಸ್ಥಾನ

ವೆಲ್ಲಿಂಗ್ಟನ್: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್ನ ಅಗ್ರಸ್ಥಾನದಿಂದ ನ್ಯೂಜಿಲೆಂಡ್ ತಂಡವು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿತು.
ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ 2–0ಯಿಂದ ಜಯಿಸಿರುವ ಕಿವೀಸ್ ಬಳಗವು ಎರಡನೇ ಸ್ಥಾನಕ್ಕೇರಿದೆ. ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ 116.461 ರೇಟಿಂಗ್ ನಲ್ಲಿದೆ. ನ್ಯೂಜಿಲೆಂಡ್ 116.375 ರೇಟಿಂಗ್ ಹೊಂದಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ತಂಡ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶದಿಂದ ಕಿವೀಸ್ಗೆ ಇತ್ತು. ಭಾರತ ತಂಡವು 114 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ಭಾರತ ತಂಡವು ಡಿಸೆಂಬರ್ 17ರಿಂದ ಅಡಿಲೇಡ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ನಲ್ಲಿ ಮುಖಾಮುಖಿಯಾಗಲಿವೆ.
ನ್ಯೂಜಿಲೆಂಡ್ ತಂಡವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಂಕಪಟ್ಟಿಯಲ್ಲೂ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ವಿಂಡೀಸ್ ವಿರುದ್ಧ 120 ಅಂಕಗಳನ್ನು ಬಾಚಿರುವ ನ್ಯೂಜಿಲೆಂಡ್ ಇದುವರೆಗೆ ಒಟ್ಟು 300 ಅಂಕಗಳನ್ನು ಪಡೆದಿದ್ದು, ಎರಡನೇ ಸ್ಥಾನದಲ್ಲಿರುವ ಭಾರತಕ್ಕೆ ಪೈಪೋಟಿಯೊಡ್ಡಿದೆ.
ಎರಡನೇ ಟೆಸ್ಟ್ನಲ್ಲಿ ಕೇನ್ ವಿಲಿಯಮ್ಸನ್ ಪಿತೃತ್ವ ರಜೆ ಪಡೆದ ಕಾರಣ ಕಿವೀಸ್ ತಂಡವನ್ನು ಟಾಮ್ ಲೇಥಮ್ ಮುನ್ನಡೆಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.