ಶುಕ್ರವಾರ, ಫೆಬ್ರವರಿ 28, 2020
19 °C
ಗಫಾರಿ ಬೌಲಿಂಗ್‌ ಗಮ್ಮತ್ತು

19 ವರ್ಷದೊಳಗಿನವರ ವಿಶ್ವಕಪ್‌: ದಕ್ಷಿಣ ಆಫ್ರಿಕಾ ಎದುರು ಅಫ್ಗಾನಿಸ್ತಾನ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಿಂಬರ್ಲಿ: ಅಫ್ಗಾನಿಸ್ತಾನ ತಂಡದ ಸ್ಪಿನ್ನರ್‌ ಶಫಿಕುಲ್ಲಾ ಗಫಾರಿ ಅವರು ‘ವಜ್ರಗಳ ನಗರಿ’ಯಲ್ಲಿ ಶುಕ್ರವಾರ ಪ್ರಜ್ವಲಿಸಿದರು.

ಗಫಾರಿ (15ಕ್ಕೆ6) ಅವರ ಅಮೋಘ ಬೌಲಿಂಗ್‌ ನೆರವಿನಿಂದ ಅಫ್ಗಾನಿಸ್ತಾನ ತಂಡವು 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿತು.

ಡೈಮಂಡ್‌ ಓವಲ್‌ನಲ್ಲಿ ನಡೆದ ‘ಡಿ’ ಗುಂಪಿನ ಹಣಾಹಣಿಯಲ್ಲಿ ಫರ್ಹಾನ್‌ ಜಾಕೀಲ್‌ ನೇತೃತ್ವದ ಅಫ್ಗಾನ್‌ ತಂಡ 7 ವಿಕೆಟ್‌ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಪರಾಭವಗೊಳಿಸಿತು.

ಮೊದಲು ಬ್ಯಾಟ್‌ ಮಾಡಿದ ಬ್ರೈಸ್‌ ಪಾರ್ಸನ್ಸ್‌ ಸಾರಥ್ಯದ ಆತಿಥೇಯ ತಂಡ 29.1 ಓವರ್‌ಗಳಲ್ಲಿ 129ರನ್‌ಗಳಿಗೆ ಆಲೌಟ್‌ ಆಯಿತು. ಈ ತಂಡದ ಮೂರು ಮಂದಿ ಶೂನ್ಯಕ್ಕೆ ಔಟಾದರೆ, ನಾಲ್ಕು ಮಂದಿ ಒಂದಂಕಿ ಮೊತ್ತ ಗಳಿಸಲಷ್ಟೇ ಶಕ್ತರಾದರು.

ಅಫ್ಗಾನಿಸ್ತಾನ 25 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಈ ತಂಡದ ಇಬ್ರಾಹಿಂ ಜದ್ರಾನ್‌ (52; 72ಎ, 8ಬೌಂ) ಮತ್ತು ಇಮ್ರಾನ್‌ (57; 48ಎ, 9ಬೌಂ) ಅರ್ಧಶತಕ ಬಾರಿಸಿ ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: 29.1 ಓವರ್‌ಗಳಲ್ಲಿ 129 (ಬ್ರೈಸ್‌ ಪಾರ್ಸನ್ಸ್‌ 40, ಲ್ಯೂಕ್‌ ಬ್ಯೂಫೋರ್ಟ್‌ 25, ಗೆರಾಲ್ಡ್‌ ಕೊಯೆಟ್ಜಿ 38; ಫಜಲ್‌ ಹಕ್‌ 43ಕ್ಕೆ2, ನೂರ್ ಅಹಮದ್‌ 44ಕ್ಕೆ2, ಶಫಿಕುಲ್ಲಾ ಗಫಾರಿ 15ಕ್ಕೆ6).

ಅಫ್ಗಾನಿಸ್ತಾನ: 25 ಓವರ್‌ಗಳಲ್ಲಿ 3 ವಿಕೆಟ್‌ಗೆ 130 (ಫರ್ಹಾನ್‌ ಜಾಕೀಲ್‌ 11, ಇಬ್ರಾಹಿಂ ಜದ್ರಾನ್‌ 52, ಇಮ್ರಾನ್‌ 57; ಅಚಿಲ್‌ ಕ್ಲೋಯೆಟ್‌ 20ಕ್ಕೆ2, ಟಿಯಾನ್‌ ವಾನ್‌ ವುರೆನ್‌ 14ಕ್ಕೆ1).

ಫಲಿತಾಂಶ: ಅಫ್ಗಾನಿಸ್ತಾನಕ್ಕೆ 7 ವಿಕೆಟ್‌ ಜಯ. ಪಂದ್ಯಶ್ರೇಷ್ಠ: ಶಫಿಕುಲ್ಲಾ ಗಫಾರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು