ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಸರ್‌ಗಳ ಸರದಾರ ಹಿಟ್‌ಮ್ಯಾನ್ ನೂತನ ದಾಖಲೆ

Last Updated 24 ಸೆಪ್ಟೆಂಬರ್ 2022, 10:40 IST
ಅಕ್ಷರ ಗಾತ್ರ

ನಾಗ್ಪುರ: ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎಂದ ದಾಖಲೆಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾಜನರಾಗಿದ್ದಾರೆ.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ರೋಹಿತ್ ನೂತನ ದಾಖಲೆ ಬರೆದಿದ್ದಾರೆ.

ಇದುವರೆಗೆ 138 ಪಂದ್ಯಗಳಲ್ಲಿ (130 ಇನ್ನಿಂಗ್ಸ್) ರೋಹಿತ್, 176 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (172 ಸಿಕ್ಸರ್) ದಾಖಲೆಯನ್ನು ಮುರಿದಿದ್ದಾರೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲೂ ರೋಹಿತ್ ಶರ್ಮಾ ಮುಂಚೂಣಿಯಲ್ಲಿದ್ದು, ಈವರೆಗೆ 32.53ರ ಸರಾಸರಿಯಲ್ಲಿ (141.26 ಸ್ಟ್ರೈಕ್‌ರೇಟ್) 3,677 ರನ್ ಗಳಿಸಿದ್ದಾರೆ. ರೋಹಿತ್ ನಂತರದ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 50.66ರ ಸರಾಸರಿಯಲ್ಲಿ 3,597 ರನ್ (138.18 ಸ್ಟ್ರೈಕ್‌ರೇಟ್) ಪೇರಿಸಿದ್ದಾರೆ.

ನಾಗ್ಪುರದಲ್ಲಿ ಆಸೀಸ್ ವಿರುದ್ಧ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಟೀಮ್ ಇಂಡಿಯಾ, ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-1ರ ಅಂತರದ ಸಮಬಲ ಸಾಧಿಸಿತ್ತು. ಮಳೆಯಿಂದಾಗಿ ಎಂಟು ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಆಸೀಸ್ ಒಡ್ಡಿದ 91 ರನ್ ಗುರಿಯನ್ನು ಭಾರತ ಇನ್ನೂ ನಾಲ್ಕು ಎಸೆತಗಳು ಬಾಕಿ ಉಳಿದಿರುವಂತೆಯೇ 7.2 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು.

ನಾಯಕನ ಆಟವಾಡಿದ ರೋಹಿತ್ ಕೇವಲ 20 ಎಸೆತಗಳಲ್ಲಿ ತಲಾ ನಾಲ್ಕು ಬೌಂಡರಿ ಹಾಗೂ ಹಾಗೂ ಬೌಂಡರಿಗಳ ನೆರವಿನಿಂದ 46 ರನ್ ಗಳಿಸಿ ಅಜೇಯರಾಗುಳಿದರು.

ಸರಣಿಯ ಕೊನೆಯ ಪಂದ್ಯವು ಭಾನುವಾರ ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಸರಣಿ ವಿಜೇತರ ನಿರ್ಣಯವಾಗಲಿದೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸರದಾರರು:

ರೋಹಿತ್ ಶರ್ಮಾ (ಭಾರತ): 176
ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 172
ಕ್ರಿಸ್ ಗೇಲ್ (ವೆಸ್ಟ್‌ ಇಂಡೀಸ್): 124
ಇಯಾನ್ ಮಾರ್ಗನ್ (ಇಂಗ್ಲೆಂಡ್): 120
ಆ್ಯರನ್ ಫಿಂಚ್ (ಆಸ್ಟ್ರೇಲಿಯಾ): 119
ಪೌಲ್ ಸ್ಟಿರ್ಲಿಂಗ್ (ಐರ್ಲೆಂಡ್): 111
ಎವಿನ್ ಲೂಯಿಸ್ (ವೆಸ್ಟ್ ಇಂಡೀಸ್): 110
ಕಾಲಿನ್ ಮುನ್ರೊ (ನ್ಯೂಜಿಲೆಂಡ್): 107
ವಿರಾಟ್ ಕೊಹ್ಲಿ (ಭಾರತ): 104
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT