ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಆಸೀಸ್‌ಗೆ ಆಘಾತ

ಭಾರತ ವಿರುದ್ಧ ಮೊದಲ ಕ್ರಿಕೆಟ್‌ ಟೆಸ್ಟ್‌
Last Updated 14 ಡಿಸೆಂಬರ್ 2020, 7:29 IST
ಅಕ್ಷರ ಗಾತ್ರ

ಸಿಡ್ನಿ: ಆಲ್‌ರೌಂಡರ್‌ ಮೊಯಿಸೆಸ್‌ ಹೆನ್ರಿಕ್ಸ್ ಅವರನ್ನು ಭಾರತ ವಿರುದ್ಧ ಮೊದಲ ಕ್ರಿಕೆಟ್‌ ಟೆಸ್ಟ್ ಪಂದ್ಯದಲ್ಲಿ ಆಡುವ ಆಸ್ಟ್ರೇಲಿಯಾ ತಂಡಕ್ಕೆ ಸೋಮವಾರ ಸೇರ್ಪಡೆಗೊಳಿಸಲಾಗಿದೆ. ಮೀನಖಂಡದ ನೋನಿಂದಾಗಿ ವೇಗಿ ಸಿಯಾನ್‌ ಅಬಾಟ್‌ ಅವರು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಮೊದಲ ಟೆಸ್ಟ್ ಹಗಲು–ರಾತ್ರಿಯದ್ದಾಗಿದ್ದು, ಇದೇ 17ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿದೆ.

ಹೆನ್ರಿಕ್ಸ್ ಸ್ನಾಯರಜ್ಜು ಬಾಧೆಯಿಂದ ಭಾರತ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಆಡಿರಲಿಲ್ಲ. ದೈಹಿಕ ಅರ್ಹತಾ ಪರೀಕ್ಷೆಯಲ್ಲಿ ತೇರ್ಗೆಡಯಾದ ನಂತರ ಅವರನ್ನು ಆಯ್ಕೆ ಮಾಡಲಾಯಿತು. ನಾಲ್ಕು ವರ್ಷಗಳ ನಂತರ ಅವರು ಟೆಸ್ಟ್‌ ತಂಡಕ್ಕೆ ಮರಳುತ್ತಿದ್ದಾರೆ. ಈ ಹಿಂದೆ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. ಆದರೆ ಭಾರತ ವಿರುದ್ಧ ಇತ್ತೀಚಿನ ಏಕದಿನ ಸರಣಿಯಲ್ಲಿ ಅವರು ಅವಕಾಶ ಪಡೆದಿದ್ದರು.

‘ಹೆನ್ರಿಕ್ಸ್‌ ಅವರನ್ನು ಭಾರತ ವಿರುದ್ಧದ ವೊಡಾಫೋನ್‌ ಮೊದಲ ಟೆಸ್ಟ್‌ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ‘ ಎಂದು ಕ್ರಿಕೆಟ್‌ ವೆಬ್‌ಸೈಟ್‌ cricket.com.au. ತಿಳಿಸಿದೆ.

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ‘ಡ್ರಾ’ ಆಗಿದ್ದ ಎರಡನೇ ಅಭ್ಯಾಸ ಪಂದ್ಯದಲ್ಲಿ ಅಬಾಟ್‌ ಅವರಿಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಮೆಲ್ಬರ್ನ್‌ನಲ್ಲಿ ಡಿಸೆಂಬರ್‌ 26ರಂದು ನಡೆಯುವ ‘ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯಕ್ಕೆ ಅವರು ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ಅಭ್ಯಾಸ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ ಪಡೆದಿದ್ದ ಅಬಾಟ್‌, ಆಡಿಲೇಡ್‌ಗೆ ಪಯಣಿಸುವುದಿಲ್ಲ.

ಹೆನ್ರಿಕ್ಸ್‌ ಅವರು ಟೆಸ್ಟ್‌ ತಂಡವನ್ನು ತಡವಾಗಿ ಸೇರಿಕೊಂಡ ಎರಡನೇ ಆಟಗಾರ. ಈ ಹಿಂದೆ ಮಾರ್ಕಸ್‌ ಹ್ಯಾರಿಸ್‌ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆರಂಭ ಆಟಗಾರ ಡೇವಿಡ್‌ ವಾರ್ನರ್‌ ತೊಡೆಸಂದು ನೋವಿಗೀಡಾದ ಕಾರಣ ಅವರ ಜಾಗಕ್ಕೆ ಹ್ಯಾರಿಸ್‌ ಅವರನ್ನು ಆರಿಸಲಾಗಿತ್ತು.

ಕ್ಯಾಮರೂನ್‌ ಗ್ರೀನ್‌ ಮತ್ತು ಹ್ಯಾರಿ ಕಾನವೆ ಅವರು ಕನ್‌ಕಷನ್‌ಗೆ (ಆಡುವಾಗ ಏಟು) ಒಳಗಾಗಿದ್ದಾರೆ. ಜಾಕ್ಸನ್‌ ಬರ್ಡ್ ಮೀನಖಂಡದ ನೋವಿನಿಂದ ಬಳಲುತ್ತಿದ್ದಾರೆ. ಮಾರ್ಕಸ್‌ ಸ್ಟೊಯಿನಿಸ್‌, ಆ್ಯಷ್ಟನ್‌ ಅಗರ್‌, ಮಿಚೆಲ್‌ ಸ್ಟಾರ್ಕ್ ಮತ್ತು ಜೋಶ್‌ ಹ್ಯಾಸಲ್‌ವುಡ್‌ ಅವರೂ ಒಂದಲ್ಲ ಒಂದು ಗಾಯದ ಸಮಸ್ಯೆ ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT