ಶುಕ್ರವಾರ, ಮೇ 20, 2022
23 °C

IND vs ENG 1st Test: 2ನೇ ದಿನದಾಟ ಮುಕ್ತಾಯ, ಇಂಗ್ಲೆಂಡ್‌ 555/8

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Joe root PTI photo

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಅತಿಥೇಯ ಭಾರತದ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಇಂಗ್ಲೆಂಡ್‌ ತಂಡವು 2ನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 555 ರನ್ ಗಳಿಸಿದೆ. ಒಟ್ಟು 180 ಓವರ್‌ ಆಟವಾಡಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲರ್‌ಗಳನ್ನು ಕಾಡಿದರು.

ನಾಯಕ ರೂಟ್ ಭರ್ಜರಿ ದ್ವಿಶತಕ: ನಾಯಕ ಜೋ ರೂಟ್ ಅವರ ದ್ವಿಶತಕದೊಂದಿಗೆ ಇಂಗ್ಲೆಂಡ್ ತಂಡ 500ರ ಗಡಿ ದಾಟಿತು. ಆದರೆ, ದಿನದಾಟದ ಕೊನೆಯ ಅವಧಿಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಭಾರತದ ಬೌಲರ್‌ಗಳು ಯಶಸ್ವಿಯಾದರು.

ಓದಿ: 

ಚಹಾ ವಿರಾಮದ ನಂತರ ಇಂಗ್ಲೆಂಡ್‌ಗೆ 100 ರನ್‌ ಕಲೆಹಾಕಲಷ್ಟೇ ಸಾಧ್ಯವಾಯಿತು. ಭಾರತದ ಬೌಲರ್‌ಗಳು ನಾಲ್ಕು ವಿಕೆಟ್‌ ಗಳಿಸಿ ಪಾರಮ್ಯ ಸಾಧಿಸಿದರು. ಆದರೆ, ಅಷ್ಟರಲ್ಲಾಗಲೇ ಇಂಗ್ಲೆಂಡ್ ಬೃಹತ್ ಮೊತ್ತ ಪೇರಿಸಿತ್ತು.

ಮೊದಲ ದಿನವೂ ಉತ್ತಮ ಪ್ರದರ್ಶನ ತೋರಿದ್ದ ಇಂಗ್ಲೆಂಡ್ ಮೊದಲ ದಿನದಾಟದ ಅಂತ್ಯಕ್ಕೆ 89.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿತ್ತು. ಮೂರು ವಿಕೆಟ್ ನಷ್ಟಕ್ಕೆ 263 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಎರಡನೇ ದಿನದಾಟದಲ್ಲೂ ಭಾರತೀಯ ಬೌಲರ್‌ಗಳನ್ನು ಕಾಡಿದರು.

ಓದಿ: 

ಎರಡನೇ ದಿನದಾಟದಲ್ಲಿ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿರುವ ಜೋ ರೋಟ್ ಕ್ರೀಸಿನಲ್ಲಿ ನೆಲೆಯೂರಿ ಭಾರತೀಯ ಬೌಲರ್‌ಗಳನ್ನು ಬೆನ್ನಟ್ಟಿದರು. ಇವರಿಗೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರಿಂದ ಉತ್ತಮ ಬೆಂಬಲ ದೊರಕಿತು. ಭಾರತೀಯ ಬೌಲರ್‌ಗಳನ್ನು ಬೆವರಿಳಿಸಿದ ರೂಟ್, ಸತತ ಮೂರನೇ ಪಂದ್ಯದಲ್ಲೂ 150ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿದರು. ಇನ್ನೊಂದೆಡೆ ಸ್ಟೋಕ್ಸ್ ಅರ್ಧಶತಕವನ್ನು ಪೂರ್ಣಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು