ಮಂಗಳವಾರ, ಸೆಪ್ಟೆಂಬರ್ 28, 2021
22 °C

Ind vs Eng 1st Test: ದಿಢೀರ್ ಕುಸಿದ ಇಂಗ್ಲೆಂಡ್ 183 ರನ್‌ಗೆ ಆಲೌಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಟಿಂಗ್‌ಹ್ಯಾಂ: ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 183 ರನ್‌ಗಳಿಗೆ ಆಲೌಟ್ ಆಗಿದೆ.

ನಾಯಕ ಜೋ ರೂಟ್(64) ಅರ್ಧಶತಕ ಗಳಿಸಿ ಭಾರತದ ಬೌಲಿಂಗ್ ದಾಳಿಯನ್ನು ಸ್ವಲ್ಪ ಹೊತ್ತು ಎದುರಿಸಿದರು. ಉಳಿದಂತೆ ಇತರೆ ಆಟಗಾರರಿಂದ ಹೇಳಿಕೊಳ್ಳುವಂತಹ ಆಟ ಬರಲಿಲ್ಲ.

ಆರಂಭದಲ್ಲಿ ರನ್ ಖಾತೆ ತೆರೆಯುವ ಮುನ್ನವೇ ರೋರಿ ಬರ್ನ್ಸ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದ ಬೂಮ್ರಾ ಮೊದಲ ಬ್ರೇಕ್ ನೀಡಿದರು. ಬಳಿಕ, ಉತ್ತಮವಾಗಿ ಆಡುತ್ತಿದ್ದ ಜಾಕ್ ಕ್ರಾಲಿ(27)ಗೆ ಸಿರಾಜ್ ಪೆವಿಲಿಯನ್ ದಾರಿ ತೋರಿಸಿದರು. ಬಳಿಕ, ಜಾನಿ ಬೆಸ್ಟೋ 29 ರನ್‌ಗೆ ವಿಕೆಟ್ ಒಪ್ಪಿಸಿದರು. ಸ್ಯಾಮ್ ಕರನ್ ಔಟಾಗದೆ (27) ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನ ನಡೆಸಿದರಾದರೂ ಮತ್ತೊಂದು ಕಡೆಯಿಂದ ಸಾಥ್ ಸಿಗಲಿಲ್ಲ.

ಇನಿಂಗ್ಸ್‌ನ ಕೊನೆಯ 45 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡ ದಿಢೀರ್ ಕುಸಿತದ ಮೂಲಕ 183 ರನ್‌ಗೆ ಆಲೌಟ್ ಆಯಿತು. 46 ರನ್ ನೀಡಿ 4 ವಿಕೆಟ್ ಕಬಳಿಸಿದ ಜನ್‌ಪ್ರೀತ್ ಬೂಮ್ರಾ ಮತ್ತು 28 ರನ್ ನೀಡಿ 3 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಆಂಗ್ಲರನ್ನು 200ರ ಒಳಗೆ ನಿಗ್ರಹಿಸುವಲ್ಲಿ ಯಶಸ್ವಿಯಾದರು. 41 ರನ್ ನೀಡಿ 2 ವಿಕೆಟ್ ಕಬಳಿಸಿದ ಶಾರ್ದೂಲ್ ಠಾಕೂರ್ ಉತ್ತಮ ಸಾಥ್ ನೀಡಿದರು.

ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್: ಇಂಗ್ಲೆಂಡ್ 183ಕ್ಕೆ ಆಲೌಟ್
ಜೋ ರೂಟ್ – 64
ಜಾನಿ ಬೆಸ್ಟೋ – 29

ಬೌಲಿಂಗ್:
ಜಸ್‌ಪ್ರೀತ್ ಬೂಮ್ರಾ – 46/4
ಮೊಹಮ್ಮದ್ ಶಮಿ – 28/3
ಶಾರ್ದೂಲ್ ಠಾಕೂರ್ – 41/2

 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು