ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1, 0, 0; ಕೆಟ್ಟ ಫಾರ್ಮ್‌ನಲ್ಲಿರುವ ರಾಹುಲ್‌ಗೆ ಕ್ಯಾಪ್ಟನ್ ಕೊಹ್ಲಿ ಬೆಂಬಲ

Last Updated 17 ಮಾರ್ಚ್ 2021, 5:55 IST
ಅಕ್ಷರ ಗಾತ್ರ

ಅಹಮದಾಬಾದ್: ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಹೊರತಾಗಿಯೂ ಆರಂಭಿಕ ಸ್ಥಾನಕ್ಕೆ ಕೆ.ಎಲ್. ರಾಹುಲ್ ಯೋಗ್ಯ ಬ್ಯಾಟ್ಸ್‌ಮನ್ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿಕೆ ನೀಡಿದ್ದಾರೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಯ ಮೂರನೇ ಪಂದ್ಯದಲ್ಲೂ ಖಾತೆ ತೆರೆಯುವಲ್ಲಿ ರಾಹುಲ್ ವಿಫಲವಾಗಿದ್ದರು. ದ್ವಿತೀಯ ಪಂದ್ಯದಲ್ಲೂ ರಾಹುಲ್ ಸೊನ್ನೆ ಸುಳಿ ಸುತ್ತಿದ್ದರು. ಮೊದಲ ಪಂದ್ಯದಲ್ಲಿ 1 ರನ್ ಗಳಿಸಿ ಔಟಾಗಿದ್ದರು.

ಕಳಪೆ ಫಾರ್ಮ್‌ನಿಂದಾಗಿ ತೀವ್ರ ಒತ್ತಡದಲ್ಲಿರುವ ಕರ್ನಾಟಕದ ಬ್ಯಾಟ್ಸ್‌ಮನ್ ಬೆನ್ನಿಗೆ ನಿಂತಿರುವ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಚಾಂಪಿಯನ್ ಆಟಗಾರ. ಕಳೆದ 2-3 ವರ್ಷಗಳಲ್ಲಿ ಅವರ ಅಂಕಿಅಂಶಗಳನ್ನು ನೋಡಿದರೆ ಬಹುಶಃ ಅವರೇ ಎಲ್ಲರಿಗಿಂತಲೂ ಅತ್ಯುತ್ತಮ ಆಟಗಾರ ಎಂದೆನಿಸಿದ್ದಾರೆ ಎಂದು ಹೇಳಿದರು.

ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಜೊತೆಗೆ ನಮ್ಮ ಪ್ರಮುಖ ಬ್ಯಾಟ್ಸ್‌ಮನ್ ಆಗಿ ರಾಹುಲ್ ಮುಂದುವರಿಯಲಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ಗೊಂದಲವಿಲ್ಲ. ಎರಡು ಪಂದ್ಯಗಳ ಹಿಂದೆ ನಾನು ಕೂಡಾ ವೈಫಲ್ಯ ಅನುಭವಿಸಿದ್ದೆ. ಟಿ20 ಪಂದ್ಯದಲ್ಲಿ ಐದು-ಆರು ಎಸೆತಗಳನ್ನು ಎದುರಿಸುವ ವಿಚಾರವಾಗಿದ್ದು, ಇದ್ದಕ್ಕಿದ್ದಂತೆ ನೀವು ಲಯಕ್ಕೆ ಮರಳುವಿರಿ ಎಂದು ಹೇಳಿದರು.

ಅತ್ತ ಹೇಳಿಕೆ ನೀಡಿರುವ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಟಿ20 ಮಾದರಿಯಲ್ಲಿಯಾರೂ ಕೂಡಾ ವೈಫಲ್ಯವನ್ನು ಅನುಭವಿಸಬಹುದು. ಕೆಎಲ್ ರಾಹುಲ್ 145ರ ಸ್ಟ್ರೇಕ್‌ರೇಟ್‌ನಲ್ಲಿ 40ಕ್ಕೂ ಹೆಚ್ಚು ಸರಾಸರಿಯನ್ನು ಕಾಪಾಡಿಕೊಂಡಿದ್ದಾರೆ. ಮೂರು ಪಂದ್ಯಗಳ ವೈಫಲ್ಯದಿಂದಾಗಿ ಅವರು ಈ ಮಾದರಿಯಲ್ಲಿ ಅತ್ಯುತ್ತಮ ಆಟಗಾರ ಎಂಬ ಅಂಶವನ್ನು ಬದಲಾಯಿಸಲಾಗುವುದಿಲ್ಲ ಎಂದು ಹೇಳಿದರು.

ನಾವೀಗ ಕೆ.ಎಲ್. ರಾಹುಲ್‌ರನ್ನು ಬೆಂಬಲಿಸಬೇಕಿದೆ. ಕೇವಲ ಒಂದು ಇನ್ನಿಂಗ್ಸ್ ಅಥವಾ ಹೊಡೆತದಿಂದ ಫಾರ್ಮ್‌ಗೆ ಮರಳುವ ಸಾಮರ್ಥ್ಯ ಹೊಂದಿದ್ದಾರೆ. ಈ ಕೆಟ್ಟ ಫಾರ್ಮ್‌ನಿಂದ ಅವರು ಆದಷ್ಟು ಬೇಗನೇ ಹೊರಬರುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT