ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA: ಪೂಜಾರ-ರಹಾನೆ ಫಿಫ್ಟಿ; ಊಟದ ವಿರಾಮಕ್ಕೆ ಭಾರತ 188/6

Last Updated 5 ಜನವರಿ 2022, 10:20 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ಚೇತೇಶ್ವರ ಪೂಜಾರ (53) ಹಾಗೂ ಅಂಜಿಕ್ಯ ರಹಾನೆ (58) ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಊಟದ ವಿರಾಮದ ವೇಳೆಗೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ 44 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದೆ.

ಈ ಮೂಲಕ ಭಾರತ 161 ರನ್ ಅಂತರದ ಮುನ್ನಡೆ ಗಳಿಸಿದೆ. ಹನುಮ ವಿಹಾರಿ (6*) ಹಾಗೂ ಶಾರ್ದೂಲ್ ಠಾಕೂರ್ (4*) ಕ್ರೀಸಿನಲ್ಲಿದ್ದಾರೆ.

ಸತತ ವೈಫಲ್ಯಗಳನ್ನು ಅನುಭವಿಸಿರುವ ಪೂಜಾರ ಹಾಗೂ ರಹಾನೆ ಆಕರ್ಷಕ ಅರ್ಧಶತಕಗಳನ್ನು ಗಳಿಸುವ ಮೂಲಕ ಪ್ರವಾಸಿಗರಿಗೆ ನೆರವಾದರು. ಈ ಮೂಲಕ ಟೀಕಾಕಾರರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸಿದರು.

ಮೂರನೇ ವಿಕೆಟ್‌ಗೆ ಶತಕದ (111) ಜೊತೆಯಾಟ ಕಟ್ಟಿದ ಈ ಜೋಡಿಯು ತಂಡಕ್ಕೆ ಆಸರೆಯಾದರು. ಆದರೆ ಅರ್ಧಶತಕಗಳ ಬೆನ್ನಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.

ಪೂಜಾರ 53 ಹಾಗೂ ರಹಾನೆ 58 ರನ್ ಗಳಿಸಿ ಔಟಾದರು. ಈ ಜೊತೆಯಾಟವನ್ನು ಮುರಿದ ಕಗಿಸೊ ರಬಾಡ ಮಗದೊಮ್ಮೆ ಮಾರಕವಾಗಿ ಕಾಡಿದರು. ಇದರಿಂದಾಗಿ 184 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ರಿಷಭ್ ಪಂತ್ (0) ಹಾಗೂ ರವಿಚಂದ್ರನ್ ಅಶ್ವಿನ್ (16) ವೈಫಲ್ಯ ಅನುಭವಿಸಿದರು. ದಕ್ಷಿಣ ಆಫ್ರಿಕಾ ಪರ ರಬಾಡ ಮೂರು ವಿಕೆಟ್ ಗಳಿಸಿದ್ದಾರೆ.

ಈ ಮೊದಲು ಭಾರತದ 202 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌ನಲ್ಲಿ 229 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ಶಾರ್ದೂಲ್ ಠಾಕೂರ್ 61 ರನ್ ತೆತ್ತು ಏಳು ವಿಕೆಟ್ ಕಬಳಿಸಿ ಮಿಂಚಿದರು. ಆದರೂ ಮೊದಲ ಇನ್ನಿಂಗ್ಸ್‌ನಲ್ಲಿ 27 ರನ್ ಅಂತರದ ಹಿನ್ನಡೆಗೊಳಗಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT