ಗುರುವಾರ , ಜನವರಿ 27, 2022
21 °C

NZ vs BAN: ಕಿವೀಸ್ ಎದುರು ಬಾಂಗ್ಲಾ ದೇಶಕ್ಕೆ ಐತಿಹಾಸಿಕ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೌಂಟ್ ಮಾಂಗನೂಯಿ: ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ ಎದುರು ಬಾಂಗ್ಲಾದೇಶ ಐತಿಹಾಸಿಕ ಗೆಲುವು ದಾಖಲಿಸಿತು.

ಬಾಂಗ್ಲಾದೇಶ ತಂಡದ ಮಧ್ಯಮ ವೇಗಿ ಇಬಾದತ್ ಹುಸೇನ್ ಪರಿಣಾಮಕಾರಿ ದಾಳಿಗೆ ನ್ಯೂಜಿಲೆಂಡ್‌ ಪಡೆ ಶರಣಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ತಂಡ 130 ರನ್‌ಗಳ ಮುನ್ನಡೆ ಪಡೆದುಕೊಳ್ಳುವ ಮೂಲಕ ಗೆಲುವಿನ ವಿಶ್ವಾಸ ಪಡೆದುಕೊಂಡಿತ್ತು.

ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ತಂಡ ನ್ಯೂಜಿಲೆಂಡ್‌ ತಂಡವನ್ನು 169 ರನ್‌ಗಳಿಗೆ ಕಟ್ಟಿಹಾಕಿತು. ನಂತರ  ಇನ್ನಿಂಗ್ಸ್‌ ಆರಂಭಿಸಿದ ಬಾಂಗ್ಲಾ ಪಡೆ 2 ವಿಕೆಟ್‌ ಕಳೆದು ಗೆಲುವಿನ ಗುರಿ ತಲುಪಿತು.

ಬಾಂಗ್ಲಾದೇಶ ತಂಡದ ಮಧ್ಯಮವೇಗಿ ಇಬಾದತ್ ಹುಸೇನ್ ಈ ಟೆಸ್ಟ್‌ ಪಂದ್ಯದಲ್ಲಿ 7ವಿಕೆಟ್‌ ಪಡೆದುಕೊಂಡರು. ಅವರು ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರು

ನ್ಯೂಜಿಲೆಂಡ್: ಮೊದಲ ಇನಿಂಗ್ಸ್ 328, ಎರಡನೇ ಇನಿಂಗ್ಸ್ 169
ಬಾಂಗ್ಲಾದೇಶ:  ಮೊದಲ ಇನಿಂಗ್ಸ್ 458 ಎರಡನೇ ಇನಿಂಗ್ಸ್ 42

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು