ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI | ರೋಹಿತ್ ಅವರಲ್ಲಿ ಶ್ರೇಷ್ಠ ನಾಯಕನ ಗುಣ ಲಕ್ಷಣಗಳಿವೆ: ಅಜಿಂಕ್ಯ ರಹಾನೆ

Published 11 ಜುಲೈ 2023, 10:28 IST
Last Updated 11 ಜುಲೈ 2023, 10:28 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಕಪ್ತಾನ ರೋಹಿತ್ ಶರ್ಮಾ ಅವರಲ್ಲಿ ಶ್ರೇಷ್ಠ ನಾಯಕನ ಗುಣ ಲಕ್ಷಣಗಳಿದ್ದು, ಆಟಗಾರರಿಗೆ ಹಾಯಾಗಿ ಆಡಲು ಅವಕಾಶ ನೀಡುತ್ತಾರೆ ಎಂದು ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹಾಡಿ ಹೊಗಳಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಸರಣಿಯ ಮೊದಲ ಪಂದ್ಯ ಡೊಮಿನಿಕಾದಲ್ಲಿ ಜುಲೈ 12ರಂದು ಆರಂಭವಾಗಲಿದೆ. ಟೆಸ್ಟ್ ಸರಣಿಯ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟ್ವೆಂಟಿ-20 ಸರಣಿಗಳಲ್ಲಿ ಭಾಗವಹಿಸಲಿದೆ.

ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಉಪನಾಯಕರನ್ನಾಗಿ ರಹಾನೆ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ರಹಾನೆ, ನನಗೆ ನೀಡಿರುವ ಜವಾಬ್ದಾರಿಗೆ ಒಗ್ಗಿಕೊಂಡಿದ್ದೇನೆ. ಸುಮಾರು ನಾಲ್ಕೈದು ವರ್ಷಗಳ ಕಾಲ ಉಪನಾಯಕನಾಗಿದ್ದೆ. ತಂಡಕ್ಕೆ ಪುನರಾಗಮನ ಮಾಡಿರುವುದು ಹಾಗೂ ಉಪನಾಯಕನಾಗಿರುವುದು ತುಂಬಾ ಖುಷಿ ತಂದಿದೆ ಎಂದು ಹೇಳಿದರು.

ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್‌ನಲ್ಲಿ ಮೊದಲ ಬಾರಿಗೆ ರೋಹಿತ್ ನಾಯಕತ್ವದ ಅಡಿಯಲ್ಲಿ ರಹಾನೆ ಆಡಿದ್ದರು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತರೂ ರಹಾನೆ ಭಾರತದ ಪರ ಟಾಪ್ ಸ್ಕೋರರ್ ಎನಿಸಿದ್ದರು.

35ರ ಹರೆಯದಲ್ಲೂ ತಂಡಕ್ಕೆ ಪುನರಾಗಮನದ ಕುರಿತು ಪ್ರಶ್ನಿಸಿದಾಗ, ನಾನೀಗಲೂ ಯಂಗ್ (ಚಿಕ್ಕವ) ಆಗಿದ್ದು, ನನ್ನಲ್ಲಿ ತುಂಬಾ ಕ್ರಿಕೆಟ್ ಬಾಕಿಯಿದೆ. ನಾನು ನನ್ನ ಆಟವನ್ನು ಆನಂದಿಸುತ್ತಿದ್ದು, ಬೇರೆ ಯಾವುದರ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು. ಈ ವೇಳೆ ಹತ್ತಿರದಲ್ಲೇ ಇದ್ದ ನಾಯಕ ರೋಹಿತ್ ಶರ್ಮಾ ಮುಗುಳ್ನಕ್ಕರು.

ಏತನ್ಮಧ್ಯೆ ತಂಡದಲ್ಲಿರುವ ಯುವ ಆಟಗಾರರಿಗೆ ಸಲಹೆ ನೀಡಿದ ರಹಾನೆ, ನಿಮ್ಮ ಕ್ರಿಕೆಟನ್ನು ಆನಂದಿಸಿರಿ. ಹಾಯಾಗಿ ಆಡಿ. ಅಂತರರಾಷ್ಟ್ರೀಯ ಕ್ರಿಕೆಟ್ ಬಗ್ಗೆ ಹೆಚ್ಚು ಯೋಚಿಸದಿರಿ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT