ಪ್ರಿಯಾಂಕ್‌ ಪಾಂಚಾಲ್‌ ದ್ವಿಶತಕ

7

ಪ್ರಿಯಾಂಕ್‌ ಪಾಂಚಾಲ್‌ ದ್ವಿಶತಕ

Published:
Updated:

ವಯನಾಡು: ಪ್ರಿಯಾಂಕ್‌ ಪಾಂಚಾಲ್‌ (206; 313ಎ, 26ಬೌಂ, 3ಸಿ) ಅಮೋಘ ದ್ವಿಶತಕ ಮತ್ತು ಶ್ರೀಕರ್‌ ಭರತ್‌ (142; 139ಎ, 11ಬೌಂ, 8ಸಿ) ಅವರ ಅಬ್ಬರದ ಶತಕದ ನೆರವಿನಿಂದ ಭಾರತ ‘ಎ’ ತಂಡ ಇಂಗ್ಲೆಂಡ್‌ ಲಯನ್ಸ್‌ ಎದುರಿನ ‘ಟೆಸ್ಟ್‌’ ಪಂದ್ಯದಲ್ಲಿ ಬೃಹತ್‌ ಮೊತ್ತ ಪೇರಿಸಿದೆ.

ಇಲ್ಲಿನ ಕೃಷ್ಣಗಿರಿ ಮೈದಾನದಲ್ಲಿ 1 ವಿಕೆಟ್‌ಗೆ 219ರನ್‌ಗಳಿಂದ ಶನಿವಾರ ಆಟ ಮುಂದುವರಿಸಿದ ಕೆ.ಎಲ್‌.ರಾಹುಲ್‌ ಸಾರಥ್ಯದ ಭಾರತ ‘ಎ’ ಮೊದಲ ಇನಿಂಗ್ಸ್‌ನಲ್ಲಿ 134.5 ಓವರ್‌ಗಳಲ್ಲಿ 6 ವಿಕೆಟ್‌ಗೆ 540ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ ಲಯನ್ಸ್‌ ದಿನದಾಟದ ಅಂತ್ಯಕ್ಕೆ ಐದು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 20ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ ಲಯನ್ಸ್‌: ಮೊದಲ ಇನಿಂಗ್ಸ್‌, 104.3 ಓವರ್‌ಗಳಲ್ಲಿ 340 ಮತ್ತು 5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 20.

ಭಾರತ ‘ಎ’: ಪ್ರಥಮ ಇನಿಂಗ್ಸ್‌: 134.5 ಓವರ್‌ಗಳಲ್ಲಿ 6 ವಿಕೆಟ್‌ಗೆ 540 ಡಿಕ್ಲೇರ್ಡ್‌ (ಕೆ.ಎಲ್‌.ರಾಹುಲ್‌ 89, ಪ್ರಿಯಾಂಕ್ ಪಾಂಚಾಲ್‌ 206, ರಿಕಿ ಭುಯಿ 16, ಶ್ರೀಕರ್‌ ಭರತ್‌ 142, ಜಲಜ್‌ ಸಕ್ಸೇನಾ ಔಟಾಗದೆ 28, ಶಾರ್ದೂಲ್‌ ಠಾಕೂರ್‌ ಔಟಾಗದೆ 12; ಜ್ಯಾಕ್‌ ಚಾಪೆಲ್‌ 105ಕ್ಕೆ3, ಡ್ಯಾನಿ ಬ್ರಿಗ್ಸ್‌ 144ಕ್ಕೆ2, ಜೇಮ್ಸ್‌ ಪೋರ್ಟರ್‌ 83ಕ್ಕೆ1).

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !