ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌ ಕೊಹ್ಲಿ, ಚೇತೇಶ್ವರ್ ಪೂಜಾರ ಅರ್ಧಶತಕ

ಇಂಗ್ಲೆಂಡ್‌ ಎದುರಿನ ಟೆಸ್ಟ್ ಪಂದ್ಯ: ಭಾರಿ ಮುನ್ನಡೆಯತ್ತ ಭಾರತ ದಾಪುಗಾಲು
Last Updated 20 ಆಗಸ್ಟ್ 2018, 12:37 IST
ಅಕ್ಷರ ಗಾತ್ರ

ನಾಟಿಂಗಂ: ಅರ್ಥಶತಕಗಳನ್ನು ಸಿಡಿಸಿದ ಚೇತೇಶ್ವರ್ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಮೋಹಕ ಬ್ಯಾಟಿಂಗ್‌ಗೆ ಇಂಗ್ಲೆಂಡ್ ಬೌಲರ್‌ಗಳು ಕಂಗೆಟ್ಟರು.

ಟ್ರೆಂಟ್ ಬ್ರಿಜ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದ ಭೋಜನ ವಿರಾಮದ ವೇಳೆ ಭಾರತ 60 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 194 ರನ್‌ ಗಳಿಸಿದ್ದು ಒಟ್ಟಾರೆ 362 ರನ್‌ಗಳ ಮುನ್ನಡೆ ಸಾಧಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ 329 ರನ್ ಗಳಿಸಿದ್ದ ಭಾರತ ಭಾನುವಾರ ಆತಿಥೇಯರನ್ನು 161 ರನ್‌ಗಳಿಗೆ ಕೆಡವಿತ್ತು. ದಿನದಾಟದ ಮುಕ್ತಾಯಕ್ಕೆ 31 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 124 ರನ್‌ ಗಳಿಸಿತ್ತು. ತಲಾ 33 ಮತ್ತು ಎಂಟು ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದ ಪೂಜಾರ ಮತ್ತು ಕೊಹ್ಲಿ ಸೋಮವಾರ ನಿರಾತಂಕವಾಗಿ ಬ್ಯಾಟ್‌ ಬೀಸಿದರು.

ಏಳು ಬೌಂಡರಿಗಳೊಂದಿಗೆ ಚೇತೇಶ್ವರ ಪೂಜಾರ 56 (168 ಎಸೆತ) ರನ್ ಗಳಿಸಿದರೆ ಕೊಹ್ಲಿ 96 ಎಸೆತಗಳಲ್ಲಿ ಐದು ಬೌಂಡರಿ ಸಿಡಿಸಿ 54 ರನ್‌ ಗಳಿಸಿದರು. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಉಳಿದಿದ್ದು ಚಹಾ ವಿರಾಮದ ವರೆಗೆ ಭಾರತ ಬ್ಯಾಟಿಂಗ್ ಮುಂದುವರಿಸಿ ಡಿಕ್ಲೇರ್ ಮಾಡಿಕೊಳ್ಳುವ ಸಾಧ್ಯತೆ ಇದೆ.

ಸಂಕ್ಷಿಪ್ತ ಸ್ಕೋರು: ಭಾರತ, ಮೊದಲ ಇನಿಂಗ್ಸ್‌: 329; ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 161; ಭಾರತ, ಎರಡನೇ ಇನಿಂಗ್ಸ್‌ (ಭಾನುವಾರದ ಅಂತ್ಯಕ್ಕೆ 31 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 124): 2 ವಿಕೆಟ್‌ಗಳಿಗೆ 194 (ಚೇತೇಶ್ವರ್ ಪೂಜಾರ 56, ವಿರಾಟ್‌ ಕೊಹ್ಲಿ 54).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT