‘ಭಾರತ ಉತ್ತಮ ವೇಗಿಗಳನ್ನು ಹೊಂದಿದೆ’

7

‘ಭಾರತ ಉತ್ತಮ ವೇಗಿಗಳನ್ನು ಹೊಂದಿದೆ’

Published:
Updated:
Deccan Herald

ಬೆಂಗಳೂರು: ಸದ್ಯ ಭಾರತ ತಂಡದಲ್ಲಿರುವ ಮೂವರು ವೇಗದ ಬೌಲರ್‌ಗಳು ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಬಲ್ಲ ಸಮರ್ಥರಾಗಿದ್ದಾರೆ ಎಂದು ಐಸಿಸಿ ರೆಫರಿ ಜಾವಗಲ್ ಶ್ರೀನಾಥ್ ಹೇಳಿದರು.

ಇಲ್ಲಿ ನಡೆಯುತ್ತಿರುವ ಭಾರತೀಯ ಕ್ರೀಡಾ ಪತ್ರಕರ್ತರ ಫೆಡರೇಷನ್‌ನ ವಾರ್ಷಿಕ ಸಮಾವೇಶದಲ್ಲಿ ಶನಿವಾರ ‘ಭಾರತ–ಇಂಗ್ಲೆಂಡ್ ಟೆಸ್ಟ್‌ ಸರಣಿ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. 

‘ಜಸ್‌ಪ್ರೀತ್‌ ಬೂಮ್ರಾ, ಇಶಾಂತ್‌ ಶರ್ಮಾ ಹಾಗೂ ಮೊಹಮ್ಮದ್ ಶಮಿ ಅವರು ಶ್ರೇಷ್ಠ ಬೌಲಿಂಗ್ ಮಾಡುತ್ತಿದ್ದಾರೆ.  ಈಗ ಅವರೊಂದಿಗೆ ನಾನೂ  ಸಹಬೌಲರ್‌ ಆಗಿ ತಂಡದಲ್ಲಿ ಇರಬೇಕಾಗಿತ್ತೆನಿಸುತ್ತಿದೆ. ಆದರೆ ನಾನು ಆಡುವ ಸಂದರ್ಭದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಹೋದಾಗ ತಂಡದಲ್ಲಿ ನಾಲ್ವರು ಸ್ಪಿನ್‌ ಬೌಲರ್‌ಗಳಿದ್ದರು. ನಾನು ಮತ್ತು ಮಧ್ಯಮವೇಗಿ ವೆಂಕಟೇಶ್ ಪ್ರಸಾದ್ ಇದ್ದೆವು. ಆಗ ಮೂರನೇ  ವೇಗಿಯ ಕೊರತೆ ನಮಗೆ ಸದಾ ಕಾಡುತ್ತಿತ್ತು’ ಎಂದು ನೆನಪಿಸಿಕೊಂಡರು. 

‘ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಎನ್ನುವುದು ಸಂಸ್ಕೃತಿ. ಟೆಸ್ಟ್‌ ಕ್ರಿಕೆಟ್ ಸರಣಿಗಳನ್ನು ಹಬ್ಬದಂತೆ ಕಾಣುತ್ತಾರೆ. ಅದಕ್ಕಾಗಿ ಮುಂಗಡ ಟಿಕೆಟ್ ಖರೀದಿಸುತ್ತಾರೆ. ಉದ್ಯೋಗ, ಶಾಲೆಗಳಿಂದ ರಜೆ ಪಡೆಯುತ್ತಾರೆ. ಕೌಟುಂಬಿಕ ಪ್ರವಾಸದಂತೆ ಪಂದ್ಯಗಳಿಗೆ ತೆರಳಿ ವೀಕ್ಷಿಸುತ್ತಾರೆ. ಆದ್ದರಿಂದ ಅಲ್ಲಿ ಟೆಸ್ಟ್‌ ಪಂದ್ಯಗಳಲ್ಲಿ ಜನದಟ್ಟಣೆ ಕಾಣುತ್ತದೆ’ ಎಂದರು.

ಸಂವಾದದಲ್ಲಿ ಹಾಜರಿದ್ದ ಹಿರಿಯ ಸ್ಪಿನ್ನರ್ ವೆಂಕಟಪತಿ ರಾಜು ಅವರು ಶ್ರೀನಾಥ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ಸಂವಾದದಲ್ಲಿ ಕರ್ನಾಟಕ ತಂಡದ ಆಟಗಾರ ಸ್ಟುವರ್ಟ್‌ ಬಿನ್ನಿ ಭಾಗವಹಿಸಿದ್ದರು. ಪತ್ರಕರ್ತ ಆನಂದ ವಾಸು ನಿರ್ವಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !