ಬುಧವಾರ, ನವೆಂಬರ್ 20, 2019
20 °C

ನಾಲ್ಕನೇ ಕ್ರಮಾಂಕದ ಸಮಸ್ಯೆ ಅಂತ್ಯ: ಯುವಿ

Published:
Updated:
Prajavani

ನವದೆಹಲಿ: ಭಾರತ ತಂಡಕ್ಕೆ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸಮಸ್ಯೆ ಬಗೆಹರಿಯಿತು. ರಿಷಭ್ ಪಂತ್ ಪರಿಹಾರವಾಗಿ ಲಭಿಸಿದ್ದಾರೆ ಎಂದು ಹಿರಿಯ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರಿಷಭ್ ಅವರು ನಾಲ್ಕನೇ ಕ್ರಮಾಂಕದಲ್ಲಿ ಬಂದು 41 ಎಸೆತಗಳಲ್ಲಿ 48 ರನ್‌ಗಳನ್ನು ಗಳಿಸಿದರು. ಅವರ ಆಟವನ್ನು ಯುವಿ ಶ್ಲಾಘಿಸಿದ್ದಾರೆ.

‘ಅಂತಿಮವಾಗಿ ನಾವು ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ನನ್ನು ಪಡೆದಿದ್ದೇವೆ. ಭವಿಷ್ಯದ ಸಮಸ್ಯೆಯೂ ನೀಗಿದೆ. ರಿಷಭ್  ಪಂತ್’ ಎಂದು ಯುವಿ ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)