ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌: ಟೋಕಿಯೊದಲ್ಲಿ ಭಾರತಕ್ಕೆ ಇಬ್ಬರು ಧ್ವಜಧಾರಿಗಳು?

ಭಾರತ ತಂಡದ ಕುರಿತು ನರೀಂದರ್ ಬಾತ್ರಾ ಹೇಳಿಕೆ
Last Updated 8 ಜೂನ್ 2021, 16:30 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದಲ್ಲಿ ಧ್ವಜಧಾರಿ ಗೌರವವು ಇಬ್ಬರಿಗೆ ಲಭಿಸುವ ಸಾಧ್ಯತೆ ಇದೆ.

ಇದೇ ಮೊದಲ ಬಾರಿಗೆ ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ತಲಾ ಒಬ್ಬರಿಗೆ ರಾಷ್ಟ್ರೀಯ ಧ್ವಜ ಹಿಡಿದು ಉದ್ಘಾಟನೆ ಕಾರ್ಯಕ್ರಮದಲ್ಲಿ ತಂಡವನ್ನು ಮುನ್ನಡೆಸುವ ಗೌರವ ಸಿಗಬಹುದು ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಸಿ) ಮುಖ್ಯಸ್ಥ ನರೀಂದರ್ ಬಾತ್ರಾ ತಿಳಿಸಿದ್ದಾರೆ.

‘ಈ ವಿಷಯವನ್ನು ಇನ್ನೂ ತೀರ್ಮಾನಿಸಿಲ್ಲ. ಆದರೆ ಈ ರೀತಿ ಒಂದು ಯೋಚನೆಯಂತೂ ಇದೆ. ಲಿಂಗ ತಾರತಮ್ಯವನ್ನು ಪರಿಹರಿಸಲು ಇದು ಸೂಕ್ತ ನಡೆ ಎಂಬ ಚಿಂತನೆ ನಮ್ಮದು. ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಅಥ್ಲೀಟ್‌ಗೆ ಧ್ವಜಗೌರವ ನೀಡಲು ಯೋಚಿಸಲಾಗುತ್ತಿದೆ‘ ಎಂದು ಅವರು ತಿಳಿಸಿದ್ದಾರೆ.

2016ರಲ್ಲಿ ರಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ತಾರೆ ಅಭಿನವ್ ಬಿಂದ್ರಾ ಅವರು ಧ್ವಜಧಾರಿಯಾಗಿದ್ದರು. ಪ್ರತಿಬಾರಿಯೂ ಒಬ್ಬರಿಗೆ ಮಾತ್ರ ಈ ಅವಕಾಶ ನೀಡಲಾಗುತ್ತಿತ್ತು.

ಜುಲೈ 23ರಂದು ಟೋಕಿಯೊದಲ್ಲಿ ಒಲಿಂಪಿಕ್ಸ್‌ ಆರಂಭವಾಗಲಿದೆ. 100 ಅಥ್ಲೀಟ್‌ಗಳ ಭಾರತ ತಂಡವು ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT