ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಮನೀಷ್‌ ಪಡೆಗೆ ಮಣಿದ ವಿಂಡೀಸ್‌

ಭಾರತ ‘ಎ’ ತಂಡಕ್ಕೆ 65 ರನ್‌ ಗೆಲುವು; ಶ್ರೇಯಸ್‌ ಅರ್ಧಶತಕ; ಖಲೀಲ್‌ಗೆ ಮೂರು ವಿಕೆಟ್‌
Last Updated 12 ಜುಲೈ 2019, 19:30 IST
ಅಕ್ಷರ ಗಾತ್ರ

ಕೂಲಿಡ್ಜ್‌, ವೆಸ್ಟ್‌ ಇಂಡೀಸ್‌: ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ (77; 107ಎ, 8ಬೌಂ, 1ಸಿ) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಭಾರತ ‘ಎ’ ತಂಡವು ಮೊದಲ ‘ಏಕದಿನ’ ಪಂದ್ಯದಲ್ಲಿ 65ರನ್‌ಗಳಿಂದ ವೆಸ್ಟ್‌ ಇಂಡೀಸ್‌ ‘ಎ’ ತಂಡವನ್ನು ಮಣಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿದೆ.

ಕೂಲಿಡ್ಜ್‌ ಮೈದಾನದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮನೀಷ್‌ ಪಾಂಡೆ ಸಾರಥ್ಯದ ಪ್ರವಾಸಿ ತಂಡ 48.5 ಓವರ್‌ಗಳಲ್ಲಿ 190ರನ್‌ ಗಳಿಸಿತು.

191ರನ್‌ಗಳ ಸಾಧಾರಣ ಗುರಿ ರಾಸ್ಟನ್‌ ಚೇಸ್‌ ಮುಂದಾಳತ್ವದ ವಿಂಡೀಸ್‌ ‘ಎ’ಗೆ ಬೆಟ್ಟದಂತೆ ಕಂಡಿತು. ಆತಿಥೇಯರು 35.5 ಓವರ್‌ಗಳಲ್ಲಿ 125ರನ್‌ಗಳಿಗೆ ಹೋರಾಟ ಮುಗಿಸಿದರು.

ಜೊನಾಥನ್‌ ಕಾರ್ಟರ್‌ (ಔಟಾಗದೆ 41; 98ಎ, 1ಬೌಂ) ಮತ್ತು ರಾವಮನ್‌ ಪೊವೆಲ್‌ (41; 40ಎ, 3ಬೌಂ, 2ಸಿ) ತಂಡವನ್ನು ಗೆಲುವಿನ ದಡ ಮುಟ್ಟಿಸಲು ನಡೆಸಿದ ಪ್ರಯತ್ನ ವಿಫಲವಾಯಿತು.

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೆ ಪೆವಿಲಿಯನ್‌ ಸೇರಿದ್ದು ಆತಿಥೇಯರಿಗೆ ಮುಳುವಾಯಿತು.

ಆರಂಭಿಕ ಸಂಕಷ್ಟ: ಬ್ಯಾಟಿಂಗ್‌ ಆರಂಭಿಸಿದ ಭಾರತ ‘ಎ’ ಕೂಡಾ ಆರಂಭಿಕ ಸಂಕಷ್ಟ ಎದುರಿಸಿತ್ತು. ಋತುರಾಜ್‌ ಗಾಯಕವಾಡ್‌ (3), ಶುಭಮನ್‌ ಗಿಲ್‌ (10) ಮತ್ತು ಮನೀಷ್‌ (4) ಬೇಗನೆ ವಿಕೆಟ್‌ ನೀಡಿದರು.

ಈ ಹಂತದಲ್ಲಿ ಶ್ರೇಯಸ್‌ ಮತ್ತು ಹನುಮ ವಿಹಾರಿ (34; 63ಎ, 3ಬೌಂ) ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಈ ಜೋಡಿ ವಿಂಡೀಸ್‌ ಬೌಲರ್‌ಗಳನ್ನು ಕಾಡಿತು. ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ (16), ಆಲ್‌ರೌಂಡರ್‌ಗಳಾದ ಅಕ್ಷರ್‌ ಪಟೇಲ್‌ (17) ಮತ್ತು ವಾಷಿಂಗ್ಟನ್‌ ಸುಂದರ್‌ (ಔಟಾಗದೆ 10) ಅವರು ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: 48.5 ಓವರ್‌ಗಳಲ್ಲಿ 190 (ಶುಭಮನ್‌ ಗಿಲ್‌ 10, ಶ್ರೇಯಸ್‌ ಅಯ್ಯರ್‌ 77, ಮನೀಷ್‌ ಪಾಂಡೆ 4, ಹನುಮ ವಿಹಾರಿ 34, ಇಶಾನ್‌ ಕಿಶನ್‌ 16, ಅಕ್ಷರ್‌ ಪಟೇಲ್‌ 17, ವಾಷಿಂಗ್ಟನ್‌ ಸುಂದರ್‌ ಔಟಾಗದೆ 10, ರಾಹುಲ್‌ ಚಾಹರ್‌ 8, ಖಲೀಲ್‌ ಅಹಮದ್‌ 9; ರೊಮೇರಿಯೊ ಶೆಫರ್ಡ್‌ 13ಕ್ಕೆ1, ಅಕೀಮ್‌ ಜೋರ್ಡನ್‌ 43ಕ್ಕೆ3, ರಖೀಮ್‌ ಕಾರ್ನ್‌ವಾಲ್‌ 41ಕ್ಕೆ1, ರಾಸ್ಟನ್‌ ಚೇಸ್‌ 19ಕ್ಕೆ4).

ವೆಸ್ಟ್‌ ಇಂಡೀಸ್‌ ‘ಎ’: 35.5 ಓವರ್‌ಗಳಲ್ಲಿ 125 (ಶೇನ್‌ ಡೌರಿಚ್‌ 9, ರಾಸ್ಟನ್‌ ಚೇಸ್‌ 7, ಜೊನಾಥನ್‌ ಕಾರ್ಟರ್‌ ಔಟಾಗದೆ 41, ರಾವಮನ್‌ ಪೊವೆಲ್‌ 41, ಖಾರಿ ಪಿಯೆರ್‌ 12; ದೀಪಕ್‌ ಚಾಹರ್‌ 23ಕ್ಕೆ1, ಖಲೀಲ್‌ ಅಹಮದ್‌ 16ಕ್ಕೆ3, ರಾಹುಲ್‌ ಚಾಹರ್‌ 32ಕ್ಕೆ2, ಅಕ್ಷರ್‌ ಪಟೇಲ್‌ 16ಕ್ಕೆ2, ವಾಷಿಂಗ್ಟನ್‌ ಸುಂದರ್‌ 37ಕ್ಕೆ2).

ಫಲಿತಾಂಶ: ಭಾರತ ‘ಎ’ ತಂಡಕ್ಕೆ 65ರನ್‌ ಗೆಲುವು. 5 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಪಂದ್ಯಶ್ರೇಷ್ಠ: ಶ್ರೇಯಸ್‌ ಅಯ್ಯರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT