ಬಾರ್ಡರ್–ಗಾವಸ್ಕರ್ ಟ್ರೋಫಿ: ಆರಂಭದಲ್ಲೇ ಆಸ್ಟ್ರೇಲಿಯಾಗೆ ಆಘಾತ ನೀಡಿದ ಬೂಮ್ರಾ

ಅಡಿಲೇಡ್: ಇಲ್ಲಿ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಟೆಸ್ಟ್‌ನ ಮೂರನೇ ದಿನವಾದ ಶನಿವಾರ ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯ, ಮತ್ತೆ ಮಳೆಯ ಕಾರಣದಿಂದಲೇ ಆಟ ನಿಲ್ಲಿಸಬೇಕಾಯಿತು.
ಶುಕ್ರವಾರ 88 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 191 ರನ್ ಗಳಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿಯೇ ಜಸ್‌ಪ್ರೀತ್ ಬೂಮ್ರಾ ಆಘಾತ ನೀಡಿದರು. ಬೂಮ್ರಾ ಎಸೆತಕ್ಕೆ ಡ್ರೈವ್ ಮಾಡಲು ಯತ್ನಿಸಿದ ಮಿಷೆಲ್ ಸ್ಟಾರ್ಕ್ ಕ್ಯಾಚ್ ನೀಡುವುದರೊಂದಿಗೆ ಆಟ ಮುಗಿಸಿದರು.
Bumrah picks up his third wicket just before the rain delay in Adelaide: https://t.co/lTUqyqRMzW #AUSvIND pic.twitter.com/2qYG9VM1gU
— cricket.com.au (@cricketcomau) December 8, 2018
ಆರನೇ ಕ್ರಮಾಂಕದಲ್ಲಿ ಆಡುತ್ತಿರುವ ಟ್ರಾವಿಸ್ ಹೆಡ್(66) ಆಟ ಮುಂದುವರಿಸಿದ್ದು, ಭಾರತ ಕಲೆ ಹಾಕಿರುವ ಮೊತ್ತವನ್ನು ಸರಿಗಟ್ಟುವ ಉತ್ಸಾಹದಲ್ಲಿದ್ದಾರೆ. ಮಳೆಯಿಂದ ಆಟ ನಿಲ್ಲಿಸುವ ವೇಳೆ ಆಸ್ಟ್ರೇಲಿಯಾ 91.4 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 204 ರನ್‌ಗಳಿಸಿತ್ತು. ಮೊದಲ ಇನಿಂಗ್ಸ್ ಬಾಕಿ ಚುಕ್ತಾ ಮಾಡಲು ಇನ್ನೂ 46 ರನ್‌ಗಳ ಅಗತ್ಯವಿದೆ.
ಭಾರತದ ಬೌಲರ್‌ಗಳ ಹೋರಾಟ ಮುಂದುವರಿದ್ದು, ಇಶಾಂತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ ಬಹುಬೇಗ ಆಸ್ಟ್ರೇಲಿಯಾ ವಿಕೆಟ್‌ಗಳನ್ನು ಉರುಳಿಸುವ ನಿರೀಕ್ಷೆ ಸೃಷ್ಟಿಸಿದ್ದಾರೆ. ಗುರುವಾರ ಆರಂಭವಾದ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಶತಕದ ನೆರವಿನಿಂದ ಭಾರತ ತಂಡವು 9 ವಿಕೆಟ್‌ಗಳಿಗೆ 250 ರನ್ ಗಳಿಸಿತು.
ಮಳೆ ಕಡಿಮೆಯಾಗಿದ್ದು, ಪಂದ್ಯ ಮತ್ತೆ ಆರಂಭವಾಗಿದೆ. ಪ್ರಸ್ತುತ, ಆಸ್ಟ್ರೇಲಿಯಾ 94 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 213 ರನ್ ಗಳಿಸಿದೆ.
ಲೈವ್ ಸ್ಕೋರ್: https://bit.ly/2QiN5ME
Update: If there is no further rain, play will restart at 12:30 with a scheduled Lunch break at 13:30 local #AUSvIND pic.twitter.com/VF0Ov2tlXj
— BCCI (@BCCI) December 8, 2018
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.