ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್ | ವೇಗವಾಗಿ 5 ಸಾವಿರ ರನ್: ಲಾರಾ ದಾಖಲೆ ಮುರಿದ ವಾರ್ನರ್

Last Updated 14 ಜನವರಿ 2020, 13:21 IST
ಅಕ್ಷರ ಗಾತ್ರ

ಮುಂಬೈ: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ಐದು ಸಾವಿರ ರನ್‌ ಪೂರೈಸಿದ 4ನೇ ಬ್ಯಾಟ್ಸ್‌ಮನ್‌ ಎನಿಸಿದರು. ಮಾತ್ರವಲ್ಲದೆ ಆಸ್ಟ್ರೇಲಿಯಾ ಪರ ಮೊದಲಿಗರಾದರು.

ಭಾರತ ವಿರುದ್ಧ ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 10 ರನ್‌ ಗಳಿಸಿದ್ದ ವೇಳೆ ಈ ಸಾಧನೆ ಮಾಡಿದರು. ಇದುವರೆಗೆ ಒಟ್ಟು 117 ಪಂದ್ಯಗಳ 115 ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ವಾರ್ನರ್‌ ಒಟ್ಟು 5027 ರನ್‌ ಕಲೆ ಹಾಕಿದ್ದಾರೆ. ಆಸಿಸ್‌ ಪರ ಈ ದಾಖಲೆಡೀನ್‌ ಜೋನ್ಸ್‌ ಹೆಸರಿನಲ್ಲಿತ್ತು. ಅವರು 128ನೇ ಇನಿಂಗ್ಸ್‌ನಲ್ಲಿ ಇಷ್ಟು ರನ್ ಕಲೆಹಾಕಿದ್ದರು.

ಒಟ್ಟಾರೆ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ ಹೆಸರಿನಲ್ಲಿದೆ. ಅವರು 101ನೇ ಇನಿಂಗ್ಸ್‌ನಲ್ಲಿ ಐದು ಸಹಸ್ರ ಪೂರೈಸಿದ್ದರು. 114 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವವಿವಿಯನ್‌ ರಿಚರ್ಡ್ಸನ್‌ ಮತ್ತು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಇಂಗ್ಲೆಂಡ್‌ನ ಜೋ ರೂಟ್‌ (116 ಇನಿಂಗ್ಸ್‌) ಇದ್ದಾರೆ.

118 ಇನಿಂಗ್ಸ್‌ನಲ್ಲಿ ಇಷ್ಟು ರನ್‌ ಪೂರೈಸಿರುವ ಭಾರತದ ಶಿಖರ್ ಧವನ್‌ ಮತ್ತು ವೆಸ್ಟ್‌ ಇಂಡೀಸ್‌ನ ಬ್ರಯಾನ್‌ ಲಾರಾ ಆರು ಮತ್ತು ಏಳನೇ ಸ್ಥಾನಗಳಲ್ಲಿದ್ದಾರೆ.

ಇಂದು ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 49.1 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 255 ರನ್‌ ಗಳಿಸಿದೆ. ಗುರಿ ಬೆನ್ನತ್ತಿರುವ ಆಸಿಸ್‌ಗೆ ಆರಂಭಿಕ ಡೇವಿಡ್‌ ವಾರ್ನರ್‌ (37) ಮತ್ತು ನಾಯಕ ಆ್ಯರನ್‌ ಫಿಂಚ್‌(41) ಉತ್ತಮ ಆರಂಭ ಒದಗಿಸಿದ್ದಾರೆ. ಫಿಂಚ್‌ ಪಡೆ 10 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 84 ರನ್ ಗಳಿಸಿ ಗೆಲುವಿನತ್ತ ಹೆ‌ಜ್ಜೆ ಇಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT