ತಿರುವನಂತಪುರ (ಪಿಟಿಐ): ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಣ ಏಕದಿನ ಕ್ರಿಕೆಟ್ ಸರಣಿಯ ಮತ್ತೊಂದು ಪಂದ್ಯಕ್ಕೂ ಮಳೆ ಅಡ್ಡಿಯಾಯಿತು. ಇದರಿಂದಾಗಿ ಇಲ್ಲಿ ಬುಧವಾರ ಆಯೊಜಿಸಲಾಗಿದ್ದ ಪಂದ್ಯದ ಅರ್ಧಭಾಗವು ಕಾಯ್ದಿಟ್ಟ ದಿನವಾದ ಗುರುವಾರ ನಡೆಯಲಿದೆ.

ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ಬಂದಿತು. ಅದರಿಂದಾಗಿ ಓವರ್ಗಳನ್ನು ಕಡಿತ ಮಾಡಲಾಯಿತು. 25–25 ಓವರ್ಗಳ ಪಂದ್ಯ ನಿಗದಿ ಮಾಡಲಾಯಿತು. ಟಾಸ್ ಗೆದ್ದ ಆತಿಥೇಯ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು

ಪ್ರವಾಸಿ ಬಳಗದ ರೀಜಾ ಹೆನ್ರಿಕ್ಸ್ (60; 70ಎಸೆತ) ಅರ್ಧಶತಕ ಬಾರಿಸಿದರು. ತಂಡವು 25 ಓವರ್ಗಳಲ್ಲಿ 1 ವಿಕೆಟ್ಗೆ 137 ರನ್ ಗಳಿಸಿತು.

ಗುರಿ ಬೆನ್ನತ್ತಿದ ಭಾರತ ಎ ತಂಡವು 7.4 ಓವರ್ಗಳಲ್ಲಿ 1 ವಿಕೆಟ್ಗೆ 56 ರನ್ ಗಳಿಸಿದ್ದಾಗ ಮಳೆ ಆರಂಭವಾಯಿತು. ಬಹಳ ಸಮಯದವರೆಗೆ ಮಳೆ ಸುರಿದ ಕಾರಣ ಆಟ ನಿಲ್ಲಿಸಲಾಯಿತು.

ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್ (12 ರನ್) ಎರಡನೇ ಓವರ್ನಲ್ಲಿಯೇ ಔಟಾದರು. ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ (ಬ್ಯಾಟಿಂಗ್ 33; 21ಎಸೆತ, 6ಬೌಂಡರಿ) ಮತ್ತು ಪ್ರಶಾಂತ್ ಚೋಪ್ರಾ (ಬ್ಯಾಟಿಂಗ್ 6) ಕ್ರೀಸ್ನಲ್ಲಿದ್ದಾರೆ.

ಆತಿಥೇಯರಿಗೆ ಜಯಿಸಲು ಇನ್ನೂ 137 ರನ್ಗಳ ಅಗತ್ಯವಿದೆ.

ಸಂಕ್ಷಿಪ್ತ ಸ್ಕೋರ್: 25 ಓವರ್ಗಳಲ್ಲಿ 1 ವಿಕೆಟ್ಗೆ 137 (ಮ್ಯಾಥ್ಯೂ ಬ್ರೀಟ್ಜ್ 25, ರೀಜಾ ಹೆನ್ರಿಕ್ಸ್ ಔಟಾಗದೆ 60, ತೆಂಬಾ ಬವುಮಾ ಗಾಯಗೊಂಡು ನಿವೃತ್ತಿ 28, ಹೆನ್ರಿಚ್ ಕ್ಲಾಸೆನ್ ಔಟಾಗದೆ 21, ರಾಹುಲ್ ಚಾಹರ್ 18ಕ್ಕೆ1) ಭಾರತ ಎ: 7.4 ಓವರ್ಗಳಲ್ಲಿ 1 ವಿಕೆಟ್ಗೆ 56 (ಶುಭಮನ್ ಗಿಲ್ 12, ಶಿಖರ್ ಧವನ್ ಬ್ಯಾಟಿಂಗ್ 33, ಪ್ರಶಾಂತ್ ಚೋಪ್ರಾ ಬ್ಯಾಟಿಂಗ್ 6, ಎನ್ರಿಚ್ ನೊರ್ಜೆ 26ಕ್ಕೆ1) ಮಳೆಯಿಂದಾಗಿ ಆಟ ಸ್ಥಗಿತ. ಗುರುವಾರಕ್ಕೆ ಮುಂದೂಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.