ಭಾನುವಾರ, ಸೆಪ್ಟೆಂಬರ್ 19, 2021
24 °C

ಕ್ರಿಕೆಟ್: ಸರಣಿ ಕೈವಶದತ್ತ ಭಾರತದ ಚಿತ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ಇಂಗ್ಲೆಂಡ್‌ನಲ್ಲಿರುವ ಭಾರತ ಟೆಸ್ಟ್ ತಂಡ ಸೇರಿಕೊಳ್ಳುವ ಸಿದ್ಧತೆಯಲ್ಲಿರುವ ಸೂರ್ಯಕುಮಾರ್ ಯಾದವ್ ಮತ್ತುಪೃಥ್ವಿ ಶಾ ಇದ್ದಾರೆ.

ಆದ್ದರಿಂದ ಮಂಗಳವಾರ ಇಲ್ಲಿ ನಡೆಯಲಿರುವ ಶ್ರೀಲಂಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಅವರಿಬ್ಬರ  ಸ್ಥಾನಗಳಲ್ಲಿ ಆಡಲು ಯುವಪ್ರತಿಭೆಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಪೃಥ್ವಿ ಶಾ ಸ್ಥಾನದಲ್ಲಿ ಇನಿಂಗ್ಸ್‌ ಆರಂಭಿಸಲು ಕರ್ನಾಟಕದ ದೇವದತ್ತ ಪಡಿಕ್ಕಲ್ ಅಥವಾ ಮಹಾರಾಷ್ಟ್ರದ ಋತುರಾಜ್ ಗಾಯಕವಾಡ್ ಅವರಲ್ಲಿ ಒಬ್ಬರು ಸ್ಥಾನ ಗಳಿಸಬಹುದು.

ಕೇರಳದ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಮತ್ತೊಂದು ಅವಕಾಶ ಪಡೆಯುವುದು ಬಹುತೇಕ ಖಚಿತವಾಗಿದ್ದು, ತಮ್ಮ ಸಾಮರ್ಥ್ಯವನ್ನು ತೋರಲು ಸಿದ್ಧರಾಗಿದ್ದಾರೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದಿರುವ ಭಾರತವು ಸರಣಿ ಕೈವಶ ಮಾಡಿಕೊಳ್ಳುವ ಛಲದಲ್ಲಿದೆ. ಮಧ್ಯಮವೇಗಿ ಭುವನಶ್ವರ್ ಕುಮಾರ್ ಉತ್ತಮ

ಈ ಪಂದ್ಯದಲ್ಲಿ ತಿರುಗೇಟು ನೀಡಲು ಶ್ರೀಲಂಕಾ ಸಿದ್ಧವಾಗಿದೆ. ಏಕದಿನ ಸರಣಿಯ ಸೋಲು ಮತ್ತು ಮೊದಲ ಟಿ20 ಪಂದ್ಯದ ನಿರಾಶೆ ನಂತರ ತಂಡದ ಬಗ್ಗೆ ಬಹಳಷ್ಟು ಟೀಕೆಗಳು ವ್ಯಕ್ತವಾಗಿವೆ. ಆದ್ದರಿಂದ ಈ ಸರಣಿಯ ಗೆಲುವಿನ ಅವಕಾಶ ಜೀವಂತವಾಗಿರಬೇಕಾದರೆ ಈ ಪಂದ್ಯದಲ್ಲಿ ಜಯಿಸುವುದು ಆತಿಥೇಯರಿಗೆ  ಅನಿವಾರ್ಯವಾಗಿದೆ.

ತಂಡಗಳು: ಭಾರತ: ಶಿಖರ್ ಧವನ್ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್),  ಸಂಜು ಸ್ಯಾಮ್ಸನ್,   ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಯಜುವೇಂದ್ರ ಚಾಹಲ್, ವರುಣ್ ಚಕ್ರವರ್ತಿ, ಮನೀಷ್ ಪಾಂಡೆ, ಕುಲದೀಪ್ ಯಾದವ್, ಕೆ. ಗೌತಮ್, ನಿತೀಶ್ ರಾಣಾ, ನವದೀಪ್ ಸೈನಿ, ಋತುರಾಜ್ ಗಾಯಕವಾಡ್, ದೇವದತ್ತ ಪಡಿಕ್ಕಲ್, ರಾಹುಲ್ ಚಾಹರ್, ಚೇತನ್ ಸಕಾರಿಯಾ.

ಶ್ರೀಲಂಕಾ: ದಸುನ್ ಶನಾಕ (ನಾಯಕ), ಮಿನೊದ್ ಭಾನುಕಾ (ವಿಕೆಟ್‌ಕೀಪರ್),  ಅವಿಷ್ಕಾ ಫರ್ನಾಂಡೊ, ಧನಂಜಯ ಡಿಸಿಲ್ವಾ, ಚರಿತ ಅಸ್ಲೆಂಕಾ, ಚಮಿಕಾ ಕರುಣಾರತ್ನೆ, ಅಷೆನ್ ಭಂಡಾರ, ವಾಣಿಂದು ಹಸರಂಗ, ಇಸುರು ಉಡಾನ, ದುಷ್ಮಂತ ಚಾಮಿರಾ, ಅಖಿಲ ಧನಂಜಯ್, ಭಾನುಕಾ ರಾಜಪಕ್ಷೆ, ರಮೇಶ್ ಮೆಂಡಿಸ್, ಬಿನುರಾ ಫರ್ನಾಂಡೊ, ಲಕ್ಷನ್ ಸಂದಕನ್, ಪ್ರವೀಣ್ ಜಯವಿಕ್ರಂ, ಧನಂಜಯ್ ಲಕ್ಷಣ್, ಪತುಮ್ ನಿಶಾಂಕ, ಲಾಹಿರು ಉದಾರಾ, ಶಿರನ್ ಫರ್ನಾಂಡೊ.

ಪಂದ್ಯ ಆರಂಭ: ರಾತ್ರಿ 8ರಿಂದ ನೇರಪ್ರಸಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು