ಅಡಿಲೇಡ್: ಸ್ಮೃತಿ ಮಂದಾನ ಹಾಗೂ ಜೆಮಿಮಾ ಶತಕದ ಜೊತೆಯಾಟದ ಬಲದಿಂದ ಭಾರತ ಮಹಿಳಾ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿ ಟಿ20 ಕ್ರಿಕೆಟ್ ಸರಣಿ ಗೆದ್ದು ಇತಿಹಾಸ ರಚಿಸಿತು.

ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 17 ರನ್ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯನ್ನು 2–1ರಿಂದ ಜಯಿಸಿತು. ಸ್ಮೃತಿ (82; 55ಎ, 4X8, 6X3) ಮತ್ತು ಜಿಮಿಮಾ (59;46ಎ, 4X4) ಅವರ 121 ರನ್ಗಳ ಜೊತೆಯಾಟದ ಬಲದಿಂದ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 176 ರನ್ ಗಳಿಸಿತು. ಜಿಮಿಮಾ ಅವರು ಮಹತ್ವದ ಘಟ್ಟದಲ್ಲಿ ಪಡೆದ ಆಕರ್ಷಕ ಕ್ಯಾಚ್ನಿಂದಾಗಿ ಭಾರತದ ಜಯ ಸುಲಭವಾಯಿತು.

ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡವು ನಿಗದಿಯ ಓವರ್ಗಳಲ್ಲಿ 9 ವಿಕೆಟ್ಗಳಿಗೆ 159 ರನ್ ಗಳಿಸಿ ಸೋತಿತು. ಕರ್ನಾಟಕದ ಶ್ರೇಯಾಂಕಾ ಪಾಟೀಲ (22ಕ್ಕೆ3) ಮತ್ತು ಸ್ಪಿನ್ನರ್ ಶ್ರೀಚರಣಿ (35ಕ್ಕೆ2) ಅವರು ಮಿಂಚಿದರು.

ಭಾರತದ ಬೌಲರ್ಗಳ ಶಿಸ್ತಿನ ದಾಳಿಯ ಮುಂದೆ ಆತಿಥೇಯ ತಂಡದ ಬ್ಯಾಟರ್ಗಳು ಕುಸಿದರು. ಆದರೆ ಐದನೇ ಕ್ರಮಾಂಕದ ಬ್ಯಾಟರ್ ಆ್ಯಷ್ಲೆ ಗಾರ್ಡನರ್ (57; 45ಎ, 4X5, 6X1) ಅವರು ಒಂದು ಹಂತದಲ್ಲಿ ತಮ್ಮ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ಅರುಂಧತಿ ರೆಡ್ಡಿ ಹಾಕಿದ 16ನೇ ಓವರ್ನಲ್ಲಿ ಗಾರ್ಡನರ್ ಬೌಂಡರಿಯತ್ತ ಹೊಡೆದ ಚೆಂಡನ್ನು ಡೀಪ್ ಮಿಡ್ವಿಕೆಟ್ನಲ್ಲಿದ್ದ ಜಿಮಿಮಾ ಓಡಿ ಬಂದು ಡೈವ್ ಮಾಡಿ ಪಡೆದ ಕ್ಯಾಚ್ ಪಂದ್ಯಕ್ಕೆ ತಿರುವು ನೀಡಿತು. ಆಗ ಆಸ್ಟ್ರೇಲಿಯಾದ ಮೊತ್ತ 6 ವಿಕೆಟ್ಗಳಿಗೆ 128 ಆಗಿತ್ತು. ನಂತರದ ಹಂತದಲ್ಲಿ ಭಾರತದ ಬೌಲರ್ಗಳು ಬಿಗಿಹಿಡಿತ ಸಾಧಿಸಿದರು. ಇದರಿಂದಾಗಿ ಗೆಲುವು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್ಗಳಲ್ಲಿ 6ಕ್ಕೆ176 (ಸ್ಮೃತಿ ಮಂದಾನ 82, ಜಿಮಿಮಾ ರಾಡ್ರಿಗಸ್ 59, ರಿಚಾ ಘೋಷ್ 18, ಅನಾಬೆಲ್ ಸದರ್ಲೆಂಡ್ 34ಕ್ಕೆ2) ಆಸ್ಟ್ರೇಲಿಯಾ: 20 ಓವರ್ಗಳಲ್ಲಿ 9ಕ್ಕೆ159 (ಫೋಬಿ ಲಿಚ್ಫೀಲ್ಡ್ 26, ಆ್ಯಷ್ಲೆ ಗಾರ್ಡನರ್ 57, ಜಾರ್ಜಿಯಾ ವೆರ್ಹಾಮ್ 12, ಅನಾಬೆಲ್ ಸದರ್ಲೆಂಡ್ 14, ಶ್ರೇಯಾಂಕಾ ಪಾಟೀಲ 22ಕ್ಕೆ3, ಅರುಂಧತಿ ರೆಡ್ಡಿ 35ಕ್ಕೆ2, ಶ್ರೀಚರಣಿ 32ಕ್ಕೆ3) ಫಲಿತಾಂಶ: ಭಾರತ ತಂಡಕ್ಕೆ 17 ರನ್ ಜಯ. ಸರಣಿಯಲ್ಲಿ 2–1 ರಿಂದ ಗೆಲುವು. ಪಂದ್ಯ ಆಟಗಾರ್ತಿ: ಸ್ಮೃತಿ ಮಂದಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.