ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಮತ್ತೆ ಶಾಕ್; ನಾಲ್ಕು ವಿಕೆಟ್‌ಗಳಿಂದ ಗೆದ್ದ ಆಸ್ಟ್ರೇಲಿಯಾ ‘ಎ’ ತಂಡ

ಪೂನಂ, ಮೋನಾ ಆಟ ವ್ಯರ್ಥ
Last Updated 17 ಅಕ್ಟೋಬರ್ 2018, 13:51 IST
ಅಕ್ಷರ ಗಾತ್ರ

ಮುಂಬೈ: ನಾಯಕಿ ಮತ್ತು ಆರಂಭಿಕ ಬ್ಯಾಟ್ಸ್‌ವುಮನ್‌ ಪೂನಮ್‌ ರಾವತ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌ ಮೋನಾ ಮೇಶ್ರಮ್‌ ಅವರ ಆಟ ವ್ಯರ್ಥವಾಯಿತು. ಸಂಘಟಿತ ಹೋರಾಟ ನಡೆಸಿದ ಆಸ್ಟ್ರೇಲಿಯಾ ಮಹಿಳೆಯರ ‘ಎ’ ತಂಡದವವರು ಭಾರತ ಮಹಿಳಾ ‘ಎ’ ತಂಡದ ಎದುರಿನ ಏಕದಿನ ಸರಣಿಯ ಎರಡನೇ ಪಂದ್ಯವನ್ನೂ ಗೆದ್ದರು.

ಇಲ್ಲಿನ ಬಿಕೆಸಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತದ 197 ರನ್‌ಗಳ ಮೊತ್ತವನ್ನು 41ನೇ ಓವರ್‌ನಲ್ಲೇ ಹಿಂದಿಕ್ಕಿದ ಮೋಲಿ ಸ್ಟ್ರಾನೊ ಬಳಗ ನಾಲ್ಕು ವಿಕೆಟ್‌ಗಳ ಗೆಲುವು ದಾಖಲಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ಪೂನಂ ರಾವತ್ ಮತ್ತು ಪ್ರಿಯಾ ಪೂನಿಯಾ ಅವರ ತಾಳ್ಮೆಯ ಆಟದ ಮೂಲಕ ಮೊದಲ ವಿಕೆಟ್‌ಗೆ 33 ರನ್‌ ಸೇರಿಸಿತು. ಪ್ರಿಯಾ ಒಳಗೊಂಡಂತೆ ಮೂರು ವಿಕೆಟ್‌ಗಳು ಬೇಗನೇ ಉರುಳಿದವು. 57 ರನ್‌ಗಳಿಗೆ ಮೂರು ವಿಕೆಟ್‌ಗಳು ಕಳೆದುಕೊಂಡಿದ್ದ ಸಂದರ್ಭದಲ್ಲಿ ಪೂನಂ (64; 99 ಎಸೆತ, 10 ಬೌಂಡರಿ) ಜೊತೆಗೂಡಿದ ಮೋನಾ ಮೇಶ್ರಮ್‌ (59; 71 ಎಸೆತ, 8 ಬೌಂಡರಿ) ನಾಲ್ಕನೇ ವಿಕೆಟ್‌ಗೆ 50 ರನ್‌ ಸೇರಿಸಲು ನೆರವಾದರು.

ಇವರಿಬ್ಬರು ಔಟಾದ ನಂತರ ಯಾರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ‘ಎ’ ತಂಡ ಕೂಡ ಆರಂಭದಲ್ಲಿ ಆಘಾತ ಅನುಭವಿಸಿತು. ಆದರೆ ತಹಿಲಾ ಮೆಗ್ರಾ ಮತ್ತು ಹಿದರ್ ಗ್ರಹಾಂ (ಅಜೇಯ 68; 87 ಎಸೆತ, 7 ಬೌಂಡರಿ) ಅವರ ಉತ್ತಮ ಆಟದ ನೆರವಿನಿಂದ ಗೆಲುವಿನ ದಡ ಸೇರಿತು.

ಮೊದಲ ಪಂದ್ಯದಲ್ಲಿ ಭಾರತ ‘ಎ’ ತಂಡ 91 ರನ್‌ಗಳಿಂದ ಮಣಿದಿತ್ತು. ಮೂರನೇ ಮತ್ತು ಅಂತಿಮ ಪಂದ್ಯ ಇದೇ 19ರಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಭಾರತ ‘ಎ’: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 197 (ಪೂನಮ್‌ ರಾವತ್‌ 64, ಪ್ರಿಯಾ ಪೂನಿಯಾ 15, ಮೋನಾ ಮೇಶ್ರಮ್‌ 59, ಪಿ.ಆರ್.ಬೋಸ್‌ 19; ತಹಿಲಾ ಮೆಗ್ರಾ 32ಕ್ಕೆ2, ಮೋಲಿ ಸ್ಟ್ರಾನೊ 23ಕ್ಕೆ3); ಆಸ್ಟ್ರೇಲಿಯಾ ‘ಎ’: 40.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 200 (ಜಾರ್ಜಿಯಾ 22, ತಹಿಲಾ ಮೆಗ್ರಾ 47, ಹಿದರ್ ಗ್ರಹಾಂ 68, ಸಮಿ ಜಾನ್ಸನ್‌ 21; ಶಿಖಾ ಪಾಂಡೆ 38ಕ್ಕೆ3, ರೀಮಾಲಕ್ಷ್ಮಿ ಎಕ್ಕ 18ಕ್ಕೆ 15ಕ್ಕೆ1, ರಾಜೇಶ್ವರಿ ಗಾಯಕವಾಡ್‌ 35ಕ್ಕೆ2). ಫಲಿತಾಂಶ: ಆಸ್ಟ್ರೇಲಿಯಾ ‘ಎ’ ತಂಡಕ್ಕೆ 4 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT