ಮಂಗಳವಾರ, ನವೆಂಬರ್ 24, 2020
25 °C

ಯುಎಇ ತಲುಪಿದ ಮಹಿಳಾ ಕ್ರಿಕೆಟ್ ತಂಡಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಂಗವಾಗಿ ನಡೆಯಲಿರುವ ಮಹಿಳೆಯರ ಚಾಲೆಂಜರ್ಸ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ 30 ಕ್ರಿಕೆಟ್ ಆಟಗಾರ್ತಿಯರು ಗುರುವಾರ ಯುಎಇಗೆ ಬಂದಿಳಿದರು.

’ಮಹಿಳೆಯರ ಮಿನಿ ಐಪಿಎಲ್‘ ಎಂದೇ ಕರೆಯಲಾಗುವ ಈ ಟೂರ್ನಿಯು ನವೆಂಬರ್ 4 ರಿಂದ 9ರವರೆಗೆ ಶಾರ್ಜಾದಲ್ಲಿ ನಡೆಯಲಿದೆ. ಮೂರು ತಂಡಗಳು  ಆಡಲಿವೆ.

ಈ ಬಳಗದಲ್ಲಿರುವ ಭಾರತ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್ ಅವರು  ಇಲ್ಲಿಗೆ ಬರುವ ಮುನ್ನ ಮುಂಬೈನಲ್ಲಿ ಒಂಬತ್ತು ದಿನಗಳ ಕ್ವಾರಂಟೈನ್‌ನಲ್ಲಿದ್ದರು. ಅವರು ಎರಡು ಬಾರಿ ಕೋವಿಡ್‌ ಪರೀಕ್ಷೆಗೆ (ಆರ್‌ಟಿ–ಪಿಸಿಆರ್) ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದರು.

ಇದೀಗ ಯುಎಇಯಲ್ಲಿ ಕೂಡ ಎಲ್ಲರೂ ಆರು ದಿನಗಳ ಪ್ರತ್ಯೇಕವಾಸ ನಿಯಮವನ್ನು ಪಾಲಿಸಲಿದ್ದಾರೆ. ಐದನೇ ದಿನ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಲಿದ್ದಾರೆ.

’ಸೂಪರ್ ನೋವಾಸ್, ಟ್ರಯಲ್‌ ಬ್ಲೆಜರ್ಸ್‌, ವೆಲೊಸಿಟಿ ತಂಡಗಳು ಇಲ್ಲಿಗೆ ಬಂದಿವೆ. ನಮ್ಮ ಹುಡುಗಿಯರು ಸಂತಸದಲ್ಲಿದ್ದಾರೆ. ಅವರಿಗೆ ಸ್ವಾಗತ. ಮಹಿಳಾ ಟಿ20 ಚಾಲೆಂಜ್ ನೋಡಲು ನಾವು ಕಾತುರರಾಗಿದ್ದೇವೆ‘ ಎಂದು ಐಪಿಎಲ್ ಸಮಿತಿಯು ಅಧಿಕೃತ ಟ್ವೀಟ್‌ ಖಾತೆಯಲ್ಲಿ ಸಂದೇಶ ಹಾಕಿದೆ.

ಈ ಮೂರು ತಂಡಗಳಿಗೆ ಮಿಥಾಲಿರಾಜ್, ಮಂದಾನಾ ಮತ್ತು ಹರ್ಮನ್‌ಪ್ರೀತ್  ಅವರು ನಾಯಕತ್ವ ವಹಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.