ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1999ರಲ್ಲೂ ಲೀಗ್‌ನಲ್ಲಿ ಸೋತು, ಫೈನಲ್‌ನಲ್ಲಿ ಗೆದ್ದಿದ್ದ ಆಸ್ಟ್ರೇಲಿಯಾ: ವಾಸೀಂ

Published 20 ನವೆಂಬರ್ 2023, 16:15 IST
Last Updated 20 ನವೆಂಬರ್ 2023, 16:15 IST
ಅಕ್ಷರ ಗಾತ್ರ

ಕರಾಚಿ: ‘1999ರಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾವನ್ನು ಎದುರಿಸಿತ್ತು. ಆಗ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ನಾವು ಮಣಿಸಿದ್ದೆವು. ಆದರೆ ಫೈನಲ್ ಪಂದ್ಯದಲ್ಲಿ ಅವರ ಆಟವೇ ಬೇರೆಯಾಗಿತ್ತು. ಭಾನುವಾರ ನಡೆದ ಪಂದ್ಯದಂತೆಯೇ ಅವರ ಭಿನ್ನವಾಗಿ ಆಡಿ ಗೆದ್ದರು’ ಎಂದು ಅಕ್ರಂ ನೆನಪಿಸಿಕೊಂಡಿದ್ದಾರೆ.

‘ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡರೂ, ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದ ಭಾರತ ತಂಡ ಉತ್ತಮ ಸ್ಥಾನದಲ್ಲಿದೆ’ ಎಂದು ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ಆಟಗಾರ ವಾಸೀಂ ಅಕ್ರಂ ಹೇಳಿದ್ದಾರೆ.

ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆರು ವಿಕೆಟ್‌ಗಳಿಂದ ಭಾರತವನ್ನು ಪರಾಭವಗೊಳಿಸಿ 2023ರ ವಿಶ್ವಕಪ್ ತನ್ನದಾಗಿಸಿಕೊಂಡಿತ್ತು.

‘ಫೈನಲ್‌ ಪಂದ್ಯದಲ್ಲಿ ಸೋತಿದ್ದು ಭಾರತ ತಂಡವನ್ನು ತೀರಾ ಆಘಾತಕ್ಕೀಡು ಮಾಡಿರುವುದು ಸಹಜ. ಹಾಗೆಯೇ ಕ್ರಿಕೆಟ್‌ನಲ್ಲಿ ಇಂಥ ಅನಿರೀಕ್ಷಿತಗಳು ಎದುರಾಗುವುದೂ ಅಷ್ಟೇ ಸತ್ಯ. ಅಂತಿಮ ಪಂದ್ಯದಲ್ಲಿ ಭಾರತ ತಂಡಕ್ಕೆ ಇದು ಎದುರಾಗಿದ್ದು ದುರದೃಷ್ಟಕರ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಇಷ್ಟೆಲ್ಲದರ ನಡುವೆ ಭಾರತ ತಂಡದ ರಚನೆಯೇ ಅದ್ಭುತವಾಗಿದೆ. ಆಟಗಾರರಿಗೆ ನೀಡುವ ಸಂಭಾವನೆ, ಅವರನ್ನು ಸಜ್ಜುಗೊಳಿಸುವ ಪರಿ, ಬದಲಿ ಆಟಗಾರ ಪಟ್ಟಿಯಲ್ಲಿರುವ ಪ್ರತಿಭಾವಂತರು... ಇವೆಲ್ಲವನ್ನೂ ಭಾರತ ತಂಡ ಮುಂದುವರಿಸಿಕೊಂಡು ಹೋದಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಉತ್ತಮ ಸ್ಥಾನದಲ್ಲಿರಲಿದೆ’ ಎಂದಿದ್ದಾರೆ.

‘ಅಂತಿಮ ಪಂಧ್ಯದಲ್ಲಿ ಮಾನಸಿಕ ಒತ್ತಡವೂ ಕೆಲಸ ಮಾಡಿರಬಹುದು. ಆದರೆ ಭಾರತ ತಂಡ ವಿಶ್ವಕಪ್ ಗೆಲ್ಲಲು ಅರ್ಹತೆ ಹೊಂದಿದೆ. ಜತೆಗೆ ಆಸ್ಟ್ರೇಲಿಯಾ ಆಟಗಾರರು ಮಾನಸಿಕವಾಗಿ ಎಷ್ಟು ಸದೃಢರು ಮತ್ತು ಸಂಘಟಿತರಾಗಿ ಹೇಗೆ ಆಡಬಲ್ಲರು ಎಂಬುದನ್ನು ಅವರು ತೋರಿಸಿಕೊಟ್ಟಿದ್ದನ್ನು ನಾವು ಮರೆಯುವಂತಿಲ್ಲ. ಹೀಗಾಗಿ ಆ ತಂಡಕ್ಕೆ ಎಲ್ಲಾ ಶ್ರೇಯ ಸಲ್ಲಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT