ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್ | ಭಾರತ ಮಹಿಳಾ ತಂಡಕ್ಕೆ ಮತ್ತೆ ಸೋಲು: ಇಂಗ್ಲೆಂಡ್‌ಗೆ ಸರಣಿ

Published 9 ಡಿಸೆಂಬರ್ 2023, 17:03 IST
Last Updated 9 ಡಿಸೆಂಬರ್ 2023, 17:03 IST
ಅಕ್ಷರ ಗಾತ್ರ

ಮುಂಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಇಂದು ನಡೆದ ಎರಡನೇ ಟಿ20 ಪಂದ್ಯದಲ್ಲೂ ಗೆಲುವು ಸಾಧಿಸಿದ ಇಂಗ್ಲೆಂಡ್‌, ಮೂರು ಪಂದ್ಯಗಳ ಟಿ20 ಸರಣಿಯನ್ನು 2–0 ಅಂತರದಿಂದ ವಶಪಡಿಸಿಕೊಂಡಿತು.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಕೇವಲ 80 ರನ್‌ ಗಳಿಸಿ ಆಲೌಟ್‌ ಆಯಿತು. ಜೆಮಿಮಾ ರಾಡ್ರಿಗಸ್‌ (30) ಮತ್ತು ಸ್ಮೃತಿ ಮಂದಾನ (10) ಹೊರತುಪಡಿಸಿ ಯಾವೊಬ್ಬ ಬ್ಯಾಟರ್‌ ಎರಡಂಕಿ ಮೊತ್ತ ಗಳಿಸಲಿಲ್ಲ.

ಇಂಗ್ಲೆಂಡ್ ಪರ ಚಾರ್ಲೊಟ್ ಡೀನ್‌, ಲೌರೆನ್‌ ಬೆಲ್‌, ಎಕ್ಲೆಸ್ಟೋನ್‌ ಹಾಗೂ ಸಾರಾ ಗ್ಲೆನ್‌ ತಲಾ ಎರಡು ವಿಕೆಟ್‌ ಪಡೆದರು.

ಬಳಿಕ ಸುಲಭ ಗುರಿ ಬೆನ್ನತ್ತಿದ ಪ್ರವಾಸಿ ಪಡೆ, ಇನ್ನೂ 8.4 ಓವರ್‌ ಬಾಕಿ ಇರುವಂತೆಯೇ 82 ರನ್‌ ಗಳಿಸಿ 4 ವಿಕೆಟ್‌ ಅಂತರದ ಜಯ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT