ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾರ್ನರ್‌ ಬದಲು ಬೇರೆ ಆಟಗಾರರತ್ತ ರೈಸರ್ಸ್‌ ಗಮನ ಹರಿಸಿದೆ: ಇರ್ಫಾನ್‌ ಪಠಾಣ್

Last Updated 28 ಸೆಪ್ಟೆಂಬರ್ 2021, 12:10 IST
ಅಕ್ಷರ ಗಾತ್ರ

ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರು ಐಪಿಎಲ್‌ನಲ್ಲಿ ಆಡುವ ಸನ್‌ರೈಸರ್ಸ್‌ ಹೈದರಾಬಾದ್‌ತಂಡದಲ್ಲಿ ಮತ್ತೆ ಕಾಣಿಸಿಕೊಳ್ಳುವುದು ಅನುಮಾನವಾಗಿದೆ.‌

ರೈಸರ್ಸ್‌ ತಂಡ ಐಪಿಎಲ್-2021‌ಟೂರ್ನಿಯಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿತ್ತು. ಹೀಗಾಗಿ ವಾರ್ನರ್‌ರನ್ನು ನಾಯಕತ್ವದಿಂದ ವಜಾ ಮಾಡಲಾಗಿತ್ತು. ಅಷ್ಟಲ್ಲದೆ, ರನ್‌ ಗಳಿಸಲು ಪರದಾಡುತ್ತಿರುವ ಅವರನ್ನು ಆಡುವ ಹನ್ನೊಂದರ ಬಳಗದಿಂದಲೂ ಕೈಬಿಡಲಾಗಿತ್ತು.

ಸೋಮವಾರ ನಡೆದ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿಯುವ ಆಟಗಾರ ಪ್ರಿಯಂ ಗರ್ಗ್‌, ವಾರ್ನರ್‌ ಬದಲು ಸ್ಥಾನ ಗಿಟ್ಟಿಸಿಕೊಂಡಿದ್ದರು.

ಈ ಬಗ್ಗೆಮಾತನಾಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್‌, ರೈಸರ್ಸ್‌ ತಂಡದಿಂದ ವಾರ್ನರ್‌ ಅವರಿಗೆ ಇದುʼಸ್ಪಷ್ಟ ಸಂದೇಶʼವಾಗಿದೆ. ಬಹುಶಃ ಈ ಆಟಗಾರ ಮುಂದಿನ ದಿನಗಳಲ್ಲಿತಂಡದ ಭಾಗವಾಗಿರುವುದಿಲ್ಲ ಎಂದಿದ್ದಾರೆ.

‌ʼಸನ್‌ರೈಸರ್ಸ್ ಪಡೆ ಭವಿಷ್ಯದ ಹುಡುಕಾಟದಲ್ಲಿದೆ ಅಲ್ಲವೇ? ಹಾಗಾಗಿ, ನಾವು ನಿಮ್ಮಹೊರತಾಗಿ ಬೇರೆ ಆಟಗಾರರತ್ತ ಚಿತ್ತ ಹರಿಸಿದ್ದೇವೆ ಎಂದುವಾರ್ನರ್‌ಗೆ ಸ್ಪಷ್ಟ ಸಂದೇಶ ನೀಡಿದೆ. ಇದು ತುಂಬಾ ಸರಳವಾದ ವಿಚಾರʼ ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ʼಟೂರ್ನಿಯ ಆರಂಭದಲ್ಲಿ ಅವರು ನಾಯಕರಾಗಿದ್ದರು. ನಂತರ ಅವರನ್ನು ತಂಡದಿಂದ ಮತ್ತು ನಾಯಕತ್ವದಿಂದ ಕೈಬಿಡಲಾಯಿತು. ವಿರಾಮದ ಬಳಿಕ ಟೂರ್ನಿಯ ಎರಡನೇ ಹಂತದಲ್ಲಿ ಅವರನ್ನು ಮತ್ತೆ ಆಡಿಸಲಾಯಿತು. ಆದರೆ,ಪುನಃ ಕೈಬಿಡಲಾಯಿತು. ಸನ್‌ರೈಸರ್ಸ್‌ ಪಡೆ ವಾರ್ನರ್‌ ಹೊರತಾಗಿ ಬೇರೆ ಆಟಗಾರರತ್ತ ಗಮನಹರಿಸುತ್ತಿದೆ ಎಂಬುದುಇದರರ್ಥʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ʼಪ್ರಿಯಂ ಗರ್ಗ್‌ ತಂಡದಲ್ಲಿ ಆಡಿದರು. ಅಭಿಷೇಕ್‌ ಶರ್ಮಾ ಬಂದರು. ಮುಂಬರುವ ದಿನಗಳಲ್ಲಿ ತಂಡಕ್ಕಾಗಿ ಆಡಲಿರುವ ತಮ್ಮ ಅತ್ಯುತ್ತಮ ಆಟಗಾರರಿಗೆ ಅವರು (ಸನ್‌ರೈಸರ್ಸ್‌) ಅವಕಾಶ ನೀಡುತ್ತಿದ್ದಾರೆʼ ಎಂದು ಹೇಳಿದ್ದಾರೆ.

ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿಆಡುವ ಹನ್ನೊಂದರ ಬಳಗದಿಂದ ವಾರ್ನರ್‌ ಅವರಿಗೆ ಕೋಕ್‌ ನೀಡಲಾಗಿತ್ತು. ಈ ಬಗ್ಗೆ ಮಾತನಾಡಿದ್ದ ಸನ್‌ರೈಸರ್ಸ್‌ ಕೋಚ್‌ ಟ್ರೆವರ್‌ ಬಯ್ಲಿಸ್‌, ನಾವು ಫೈನಲ್‌ ತಲುಪುವುದು ಸಾಧ್ಯವಿಲ್ಲ. ಹಾಗಾಗಿ ಯುವ ಆಟಗಾರರಿಗೆ ಪಂದ್ಯದ ಅನುಭವ ಮಾತ್ರವಲ್ಲದೆಕ್ರೀಡಾಂಗಣಗಳಲ್ಲಿ ಆಡುವ ಅನುಭವವನ್ನು ನೀಡಬೇಕೆಂದು ನಿರ್ಧರಿಸಿದ್ದೇವೆ ಎಂದಿದ್ದರು.

ಮುಂದುವರಿದು,ʼಸಾಕಷ್ಟು ಯುವ ಆಟಗಾರರನ್ನು ಹೊಂದಿದ್ದೇವೆ. ಕ್ರೀಡಾಂಗಣಕ್ಕೆ ಇಳಿಯದ ಮೀಸಲು ಆಟಗಾರರಿದ್ದಾರೆ. ಹಾಗಾಗಿ ಅವರಿಗೆ ಅವಕಾಶಗಳನ್ನು ನೀಡಲುಅಟದ ಅನುಭವ ಪಡೆಯುವಂತೆ ಮಾಡಲು ಬಯಸಿದ್ದೇವೆ. ಇನ್ನೂ ಕೆಲವು ಪಂದ್ಯಗಳಿಗೆ ಇದು ಮುಂದುವರಿಯಲಿದೆʼ ಎಂದು ತಿಳಿಸಿದ್ದರು.

ರಾಯಲ್ಸ್‌ ವಿರುದ್ಧದ ಪಂದ್ಯದ ವೇಳೆ ವಾರ್ನರ್‌ ತಂಡದ ಜೊತೆಗೆ ಕ್ರೀಡಾಂಗಣಕ್ಕೆ ಆಗಮಿಸಿರಲಿಲ್ಲ. ಈ ಬಗ್ಗೆಯೂ ಹೇಳಿಕೆ ನೀಡಿರುವ ಕೋಚ್‌, ಡೇವಿಡ್‌ ಖಂಡಿತ ಹೋಟೆಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಿದ್ದಾರೆಮತ್ತು ಆಟಗಾರಿಗೆ ಬೆಂಬಲ ನೀಡಿದ್ದಾರೆ. ಉಳಿದ ತಂಡಗಳಂತೆ ನಾವೆಲ್ಲರೂ ಒಟ್ಟಿಗೆ ಇದ್ದೇವೆʼ ಎಂದು ಸ್ಪಷ್ಟಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT