ಮಂಗಳವಾರ, ಅಕ್ಟೋಬರ್ 26, 2021
23 °C

IPL 2021 | DC vs CSK: ಚೆನ್ನೈ ಮಣಿಸಿ ಅಗ್ರಸ್ಥಾನಕ್ಕೇರಿದ ಡೆಲ್ಲಿ

Published:
Updated:
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಚೆನ್ನೈ ಹಿಂದಿಕ್ಕಿದ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
 • 11:30 pm
 • 11:30 pm

  ಡೆಲ್ಲಿ ಗೆಲುವಿನ ರೋಚಕ ಕ್ಷಣ

 • 11:29 pm

  ಡೆಲ್ಲಿ ನಂ.1 - ಚೆನ್ನೈ ನಂ.2

 • 11:07 pm

  ಡೆಲ್ಲಿಗೆ ಮೂರು ವಿಕೆಟ್ ಅಂತರದ ರೋಚಕ ಗೆಲುವು

  ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

  ಇದರೊಂದಿಗೆ ಮಹೇಂದ್ರ ಸಿಂಗ್ ಧೋನಿ ಬಳಗವನ್ನು ಹಿಂದಿಕ್ಕಿರುವ ರಿಷಭ್ ಪಂತ್ ಪಡೆಯು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 

  ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಅಂಬಟಿ ರಾಯುಡು ಅಜೇಯ ಅರ್ಧಶತಕದ (55*) ಹೊರತಾಗಿಯೂ ಐದು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಳಿಕ ಗುರಿ ಬೆನ್ನತ್ತಿದ ಡೆಲ್ಲಿ, ಶಿಖರ್ ಧವನ್ (39) ಹಾಗೂ ಶಿಮ್ರೊನ್ ಹೆಟ್ಮೆಯರ್ (28*) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 19.4 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

 • 10:40 pm

  ಡಬಲ್ ಆಘಾತ ನೀಡಿದ 'ಲಾರ್ಡ್' ಶಾರ್ದೂಲ್

 • 10:28 pm

  ಗಬ್ಬರ್ ಆಟ

 • 10:10 pm

  ಜಡೇಜ ಬಲೆಗೆ ಬಿದ್ದ ಪಂತ್

 • 10:08 pm

  ಡೆಲ್ಲಿಗೆ ಧವನ್ ಆಸರೆ

  ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಪೃಥಿ ಶಾ ಹಾಗೂ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿದರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಪೃಥ್ವಿ (18) ವಿಕೆಟ್ ಪತನವಾಯಿತು. ಅತ್ತ ದೀಪಕ್ ಚಾಹರ್ ಎಸೆದ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಧವನ್ 21 ರನ್ ಸೊರೆಗೈದರು. 

  ಆದರೆ ಶ್ರೇಯಸ್ ಅಯ್ಯರ್ (2) ನಿರಾಸೆ ಮೂಡಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿತ್ತು. 

 • 10:00 pm

  ಶ್ರೇಯಸ್ ಅಯ್ಯರ್ ವಿಕೆಟ್ ಪಡೆದ ಜೋಶ್ ಹೇಜಲ್‌ವುಡ್

 • 09:59 pm

  ಧವನ್ ಅಬ್ಬರ 6,4,4,6

 • 09:58 pm

  18 ರನ್ ಗಳಿಸಿ ಪೃಥ್ವಿ ಶಾ ಔಟ್

 • 09:56 pm
 • 09:03 pm

  ರಾಯುಡು ಫಿಫ್ಟಿ, ಚೆನ್ನೈ 136/5

  ಅಂಬಟಿ ರಾಯುಡು ಅಜೇಯ ಅರ್ಧಶತಕದ (55*) ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್, ಸೋಮವಾರ ದುಬೈಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಐದು ವಿಕೆಟ್ ನಷ್ಟಕ್ಕೆ 136 ರನ್‌ ಗಳಿಸಲಷ್ಟೇ ಸಮರ್ಥವಾಯಿತು. 

  ನಾಯಕ ಮಹೇಂದ್ರ ಸಿಂಗ್ ಧೋನಿ (18) ಜೊತೆ ಸೇರಿದ ರಾಯುಡು ಐದನೇ ವಿಕೆಟ್‌ಗೆ 70 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದರು. ಇನ್ನುಳಿದಂತೆ ರಾಬಿನ್ ಉತ್ತಪ್ಪ (19), ಋತುರಾಜ್ ಗಾಯಕವಾಡ್ (13), ಫಾಫ್ ಡು ಪ್ಲೆಸಿ (10)  ರನ್ ಗಳಿಸಿದರು. 

  ಡೆಲ್ಲಿ ಪರ ಅಕ್ಷ ಪಟೇಲ್ ಎರಡು ಮತ್ತು ಏನ್ರಿಚ್ ನಾರ್ಕಿಯಾ, ಆವೇಶ್ ಖಾನ್ ಹಾಗೂ ಆರ್. ಅಶ್ವಿನ್ ತಲಾ ಒಂದು ವಿಕೆಟ್ ಗಳಿಸಿದರು. 

 • 08:58 pm

  ಧೋನಿ-ರಾಯುಡು ಅರ್ಧಶತಕದ ಜೊತೆಯಾಟ

 • 08:36 pm

  ಧೋನಿ-ರಾಯುಡು ಹೋರಾಟ

 • 08:19 pm

  10 ಓವರ್ ಅಂತ್ಯಕ್ಕೆ ಚೆನ್ನೈ 69/4

 • 08:15 pm

  62 ರನ್ನಿಗೆ ನಾಲ್ಕನೇ ವಿಕೆಟ್ ಪತನ

  62 ರನ್ನಿಗೆ ಡೆಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರಾಬಿನ್ ಉತ್ತಪ್ಪ (19) ಹಾಗೂ ಮೊಯಿನ್ ಅಲಿ (5) ಅವರಿಗೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. 

 • 08:13 pm

  ಅಕ್ಷರ್ ಸ್ಪಿನ್ ಮೋಡಿ

 • 08:12 pm

  ಚೆನ್ನೈ ಆರಂಭಿಕರಿಗೆ ಡೆಲ್ಲಿ ಬೌಲರ್‌ಗಳ ಕಡಿವಾಣ

 • 08:01 pm

  ಪವರ್ ಪ್ಲೇಯಲ್ಲಿ ಸಮಬಲದ ಹೋರಾಟ

  ಪವರ್ ಪ್ಲೇ ಅಂತ್ಯಕ್ಕೆ ಚೆನ್ನೈ ಎರಡು ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತ್ತು. ಆರಂಭಿಕರಾದ ಋತುರಾಜ್ ಗಾಯಕವಾಡ್ (13) ಹಾಗೂ ಫಾಫ್ ಡು ಪ್ಲೆಸಿ (10) ವಿಕೆಟ್ ನಷ್ಟವಾಗಿದೆ. 

 • 07:15 pm

  ಟಾಸ್ ಝಲಕ್

 • 07:14 pm

  ಚೆನ್ನೈ ಪರ ರಾಬಿನ್ ಉತ್ತಪ್ಪ ಕಣಕ್ಕೆ

 • 07:01 pm

  ಟಾಸ್ ಗದ್ದ ಪಂತ್ ಫೀಲ್ಡಿಂಗ್ ಆಯ್ಕೆ

  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

 • 07:00 pm

  ಡೆಲ್ಲಿ ಪರ ರಿಪಾಲ್ ಪಟೇಲ್ ಪದಾರ್ಪಣೆ

 • 06:59 pm

  ಅಗ್ರಸ್ಥಾನಕ್ಕಾಗಿ ಹೋರಾಟ

 • 06:57 pm

  ಆಕರ್ಷಕ ನೋಟ

 • 06:57 pm

  ಚೆನ್ನೈ ಸಜ್ಜು

 • 06:56 pm

  ಧೋನಿ ಸಲಹೆ

 • 06:54 pm
 • 06:53 pm

  ಧೋನಿ vs ಪಂತ್

 • 06:52 pm

  ಪಿಚ್ ಪರಿಶೀಲಿಸುತ್ತಿರುವ ಪಂತ್

 • 06:52 pm

  ರೋಚಕ ಕದನಕ್ಕೆ ಕ್ಷಣಗಣನೆ