IPL 2021: ಸೋಲಿನ ನಡುವೆ ಕನ್ನಡಿಗರಾದ ರಾಹುಲ್, ಮಯಂಕ್ ಸಾಧನೆ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಗೆಲುವಿನ ಅಂಚಿನಲ್ಲಿ ಎಡವಿ ಬಿದ್ದಿರುವ ಪಂಜಾಬ್ ಕಿಂಗ್ಸ್ ತಂಡವು ಎರಡು ರನ್ ಅಂತರದಿಂದ ಸೋಲಿನ ಆಘಾತಕ್ಕೊಳಗಾಗಿದೆ.
ಈ ಸೋಲಿನ ಹೊರತಾಗಿಯೂ ಕನ್ನಡಿಗರಾದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಂಕ್ ಅಗರವಾಲ್ ಐಪಿಎಲ್‌ನಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: IPL 2021: ನಟರಾಜನ್ಗೆ ಕೋವಿಡ್; ಇಂದಿನ ಪಂದ್ಯ ನಿಗದಿಯಂತೆ ನಡೆಯಲಿದೆ: ಬಿಸಿಸಿಐ
ರಾಹುಲ್, ಐಪಿಎಲ್‌ನಲ್ಲಿ 3,000 ರನ್‌ಗಳ ಮೈಲಿಗಲ್ಲು ತಲುಪಿದ ಅತಿ ವೇಗದ ಭಾರತೀಯ ಆಟಗಾರ ಎಂಬ ದಾಖಲೆಗೆ ಭಾಜನರಾಗಿದ್ದಾರೆ. ರಾಹುಲ್ ತಮ್ಮ 80ನೇ ಇನ್ನಿಂಗ್ಸ್‌ನಲ್ಲಿ (89ನೇ ಪಂದ್ಯ) ಈ ಮೈಲಿಗಲ್ಲು ಕ್ರಮಿಸಿದ್ದಾರೆ.
ಅಂದ ಹಾಗೆ ಐಪಿಎಲ್‌ನಲ್ಲಿ ಅತಿ ವೇಗದಲ್ಲಿ 3,000 ರನ್ ಗಳಿಸಿದ ದಾಖಲೆಯು ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ (75 ಇನ್ನಿಂಗ್ಸ್) ಹೆಸರಲ್ಲಿದೆ.
ಒಟ್ಟಾರೆಯಾಗಿ ಪಂಜಾಬ್ ನಾಯಕ ರಾಹುಲ್, ಐಪಿಎಲ್‌ನಲ್ಲಿ 3,000 ರನ್ ಪೂರ್ಣಗೊಳಿಸಿದ 18ನೇ ಆಟಗಾರ ಎನಿಸಿದ್ದಾರೆ.
ಅತ್ತ ಮಯಂಕ್ ಅಗರವಾಲ್, ಐಪಿಎಲ್‌ನಲ್ಲಿ 2,000 ರನ್‌ಗಳ ಮೈಲಿಗಲ್ಲು ತಲುಪಿದ್ದಾರೆ. ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಹಾಗೂ ಮಯಂಕ್ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಆದರೂ ಪಂದ್ಯ ಗೆಲ್ಲಲಾಗಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.