ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ನಾಯಕ ಪಟ್ಟಕ್ಕೆ ಮರಳಿದ ಮೊದಲ ಪಂದ್ಯದಲ್ಲಿ ತಾಳ್ಮೆ ಕಳೆದುಕೊಂಡ ಧೋನಿ

ಅಕ್ಷರ ಗಾತ್ರ

ಪುಣೆ: 'ಕೂಲ್ ಕ್ಯಾಪ್ಟನ್' ಎಂದೇ ಜನಪ್ರಿಯತೆ ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಪ್ತಾನ ಮಹೇಂದ್ರ ಸಿಂಗ್ ಧೋನಿ, ನಾಯಕನ ಪಟ್ಟಕ್ಕೆ ಮರಳಿದ ಮೊದಲ ಪಂದ್ಯದಲ್ಲೇ ತಾಳ್ಮೆ ಕಳೆದುಕೊಂಡಿರುವ ಘಟನೆ ನಡೆದಿದೆ.

ಐಪಿಎಲ್ 2022 ಟೂರ್ನಿಯಲ್ಲಿ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ರನ್ ಅಂತರದ ಗೆಲುವು ದಾಖಲಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದಸಿಎಸ್‌ಕೆ, ಋತುರಾಜ್ ಗಾಯಕವಾಡ್ ಹಾಗೂ ಡೆವೊನ್ ಕಾನ್ವೆ ಸ್ಫೋಟಕ ಆಟದ ನೆರವಿನಿಂದ ಎರಡು ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಹೈದರಾಬಾದ್, ನಿಕೋಲಸ್ ಪೂರನ್ (64*) ಹೋರಾಟದ ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಕೊನೆಯ ಓವರ್‌ನಲ್ಲಿ ಹೈದರಾಬಾದ್ ಗೆಲುವಿಗೆ 38 ರನ್ ಬೇಕಾಗಿತ್ತು. ಚೆಂಡು ಮುಖೇಶ್ ಚೌಧರಿ ಕೈಯಲ್ಲಿತ್ತು. ಆದರೆ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದ ಪೂರನ್ 24 ರನ್ ಸೊರೆಗೈಯುವಲ್ಲಿ ಯಶಸ್ವಿಯಾಗಿದ್ದರು.

ಅಂತಿಮ ಓವರ್‌ನಲ್ಲಿ ಲಯ ಕಳೆದುಕೊಂಡ ಮುಖೇಶ್ ಚೌಧರಿ ಮೇಲೆ ನಾಯಕ ಮಹೇಂದ್ರ ಸಿಂಗ್ ಧೋನಿ ಸಿಟ್ಟಾದರು.

ಪಂದ್ಯದ ಬಳಿಕ ಈ ಕುರಿತು ಪ್ರಶ್ನಿಸಿದಾಗ, 'ಧೋನಿ ವಿಶೇಷವಾಗಿಯೂ ಏನನ್ನೂ ಹೇಳಿರಲಿಲ್ಲ. 'ವಿಕೆಟ್-ಟು-ವಿಕೆಟ್' ಬೌಲಿಂಗ್ ಮಾಡುವಂತೆ ಸೂಚಿಸಿದ್ದರು. ವಿಭಿನ್ನವಾಗಿ ಪ್ರಯತ್ನ ಮಾಡುವ ಅಗತ್ಯವಿಲ್ಲ. ಖಂಡಿತವಾಗಿಯೂ ನೋ ಬಾಲ್ ಎಸೆಯಬಾರದು' ಎಂದು ಚೌಧರಿ ಪಂದ್ಯದ ಬಳಿಕ ತಿಳಿಸಿದರು.

ಅಂತಿಮ ಓವರ್‌ನಲ್ಲಿ ದುಬಾರಿಯೆನಿಸಿದ್ದರ ಹೊರತಾಗಿಯೂ ನಾಲ್ಕು ಓವರ್‌ನಲ್ಲಿ 46 ರನ್ ಬಿಟ್ಟುಕೊಟ್ಟಿದ್ದ ಚೌಧರಿ, ನಾಲ್ಕು ವಿಕೆಟ್ ಪಡೆಯುವ ಮೂಲಕ ಹೈದರಾಬಾದ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ಈ ಮೂಲಕ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT