ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 DC vs LSG: ಡಿಕಾಕ್ ಅರ್ಧಶತಕ, ಲಖನೌ ಜಯಭೇರಿ

Last Updated 7 ಏಪ್ರಿಲ್ 2022, 18:57 IST
ಅಕ್ಷರ ಗಾತ್ರ

ನವಿ ಮುಂಬೈ: ಆರಂಭಿಕ ಬ್ಯಾಟರ್, ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರ ಸ್ಫೋಟಕ ಅರ್ಧಶತಕ ಮತ್ತು ನಾಯಕ ಕೆ.ಎಲ್.ರಾಹುಲ್ ಜೊತೆಗೆ ಸೇರಿಸಿದ 73 ರನ್‌ಗಳ ಬಲದಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಭರ್ಜರಿ ಜಯ ಗಳಿಸಿತು.

ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಲಖನೌ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿತು.

150 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಲಖನೌ ತಂಡಕ್ಕೆ ರಾಹುಲ್ ಮತ್ತು ಕ್ವಿಂಟನ್ ಉತ್ತಮ ಅರಂಭ ಒದಗಿಸಿದರು. ರಾಹುಲ್ ಔಟಾದ ನಂತರ ಸತತವಾಗಿ ವಿಕೆಟ್‌ಗಳು ಉರುಳಿದವು. ಆದರೆ ಕ್ವಿಂಟನ್ ಡಿ ಕಾಕ್ ಕ್ರೀಸ್‌ನಲ್ಲಿ ಭದ್ರವಾಗಿ ತಳವೂರಿದರು. 16ನೇ ಓವರ್‌ನಲ್ಲಿ ಕ್ವಿಂಟನ್ ಔಟಾದಾಗ ತಂಡ ಆತಂಕಕ್ಕೆ ಒಳಗಾಯಿತು.

ಕೃಣಾಲ್ ಪಾಂಡ್ಯ ಮತ್ತು ಆಯುಷ್ ಬದೋನಿ ಕೊನೆಯಲ್ಲಿ ಒತ್ತಡ ಮೆಟ್ಟಿನಿಂತು ಆಡಿದರು. ಬದೋನಿ 3 ಎಸೆತಗಳಲ್ಲಿ 10 ರನ್ ಸಿಡಿಸಿ ತಂಡವನ್ನು ಜಯದ ದಡ ಸೇರಿಸಿದರು.

ಪೃಥ್ವಿ ಶಾ ಅರ್ಧಶತಕ: ಟಾಸ್ ಗೆದ್ದ ಲಖನೌ ಸೂಪರ್‌ಜೈಂಟ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡರು.ಪೃಥ್ವಿ ಶಾ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಗೌರವಯುತ ಮೊತ್ತ ಕಲೆಹಾಕಿತ್ತು.

ಲಖನೌ ತಂಡದ ಬೌಲರ್‌ಗಳ ಶಿಸ್ತಿನ ದಾಳಿಯಲ್ಲಿ ವಿಕೆಟ್‌ಗಳನ್ನು ರಕ್ಷಿಸಿಕೊಳ್ಳಲು ಡೆಲ್ಲಿ ಬ್ಯಾಟರ್‌ಗಳು ಅಬ್ಬರದ ಆಟದ ಬದಲು ಎಚ್ಚರಿಕೆಯಿಂದ ಆಡಿದರು.

ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಉತ್ತಮ ಅಡಿಪಾಯ ಹಾಕಿದರು. ಆದರೆ, ಇದರಲ್ಲಿ ಪೃಥ್ವಿ(61; 34ಎ) ಅವರದ್ದೇ ಸಿಂಹಪಾಲು. ತಂಡವು ಅವರಿಂದಾಗಿ ಏಳು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 60 ರನ್‌ಗಳ ಗಡಿ ಮುಟ್ಟಿತು. ಇನ್ನೊಂದು ಬದಿಯಲ್ಲಿದ್ದ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ವಾರ್ನರ್ 12 ಎಸೆತಗಳನ್ನು ಆಡಿ ನಾಲ್ಕು ರನ್ ಮಾತ್ರ ಗಳಿಸಿದರು.

ಎಂಟನೇ ಓವರ್‌ನಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್ ಪೃಥ್ವಿ ಶಾ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಜೊತೆಯಾಟ ಮುರಿದುಬಿತ್ತು. ಒಂಬತ್ತನೇ ಓವರ್‌ನಲ್ಲಿ ವಾರ್ನರ್ ಮತ್ತು 11ನೇ ಓವರ್‌ನಲ್ಲಿ ರೋವ್ಮನ್ ಪೊವೆಲ್ ವಿಕೆಟ್‌ಗಳನ್ನು ಗಳಿಸಿದ ಸ್ಪಿನ್ನರ್ ರವಿ ಬಿಷ್ಣೋಯಿ ಸಂಭ್ರಮಿಸಿದರು.

ಪಂತ್–ಖಾನ್ ಜೊತೆಯಾಟ:ಈ ಹಂತದಲ್ಲಿ ಜೊತೆಗೂಡಿದ ನಾಯಕ ರಿಷಭ್ ಪಂತ್ (ಔಟಾಗದೆ 39; 36ಎ) ಮತ್ತು ಸರ್ಫರಾಜ್ ಖಾನ್ (ಔಟಾಗದೆ 36; 28ಎ) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 73 ರನ್‌ಗಳನ್ನು ಸೇರಿಸಿದರು.

ಆದರೆ, ಇವರಿಬ್ಬರೂ ಹೆಚ್ಚು ಬಿರುಸಿನ ಆಟವನ್ನು ಆಡಲು ಬೌಲರ್‌ಗಳು ಅವಕಾಶ ನೀಡಲಿಲ್ಲ. ಅದರಲ್ಲೂ ಗೌತಮ್ ನಾಲ್ಕು ಓವರ್‌ಗಳಲ್ಲಿ 23 ರನ್ ಮತ್ತು ರವಿ 22 ರನ್‌ಗಳನ್ನು ಮಾತ್ರ ಕೊಟ್ಟರು. ಆವೇಶ್ ಖಾನ್ ಮೂರು ಓವರ್‌ಗಳಲ್ಲಿ 31 ರನ್ ಕೊಟ್ಟು ತುಟ್ಟಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT